ಬೆಳಗಾವಿ :ಹಿಂಡಾಲ ಕೋ ಕಂಪನಿ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ ರೈತರು ಕಂಪೆನಿಯ ಗೇಟನ್ನು ಬಂದ ಮಾಡಿ ಅನಿರ್ದಿಷ್ಟಾವಧಿ ಧರಣಿ ಮಾಡುವುದಾಗಿ ತಿಳಿಸಿದ್ದಾರೆ.
180 ಎಕರೆಯಷ್ಟು ಫಲವತ್ತಾದ ಜಮೀನು ಹಿಂಡಾಲ ಕೋ ಫ್ಯಾಕ್ಟರಿಯಿಂದ ಹೊರ ಬರುವ ರಾಸಾಯನಿಕ್ ಮಿಶ್ರಿತ ನೀರಿನಿಂದ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ ಎಂದು ರೈತ ಪರ ಹೋರಾಟಗಾರರು ತಿಳಿಸಿದ್ದಾರೆ.
54 ವರ್ಷಗಳಿಂದ್ ಹಿಂಡಾಲ ಕೋ ಯಾವುದೇ ಪರಿಹಾರ ನೀಡಿಲ್ಲ ಎಂದು ರೈತರು ದೂರಿದ್ದಾರೆ,CSR ಮೂಲಕ ಬೇರೆಯವರ ಪಾಲು ಆಗುತ್ತಿರುವ ಹಣವನ್ನು ನಿಜವಾದ ರೈತರಿಗೆ ಹಣವನ್ನು ನೀಡುವಂತೆ ಆಗ್ರಹಿಸಿದ್ದಾರೆ.
54 ವರ್ಷಗಳಿಂದ ಇಲ್ಲಿಯವರಿಗೆ ಬಾಕಿ ಇರುವ ಹಣವನ್ನು ನೀಡುವಂತೆ ಹೋರಾಟ ಮಾಡಿದರು ಯಾವದೇ ಪರಿಹಾರ ನೀಡಿಲ್ಲ ಮತ್ತು ಸುಳ್ಳು ಭರವಸೆಗಳನ್ನು ಕಂಪನಿಯವರು ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಮರಣಾಂತ ಸತ್ಯಾಗ್ರಹ ಮಾಡುವುದರ ಮೂಲಕ ಹಿಂಡಾಲ ಕೋ ಕಂಪನಿಯ ಗೇಟ್ ಬಂದ ಮಾಡಿ ಮುಷ್ಕರ ಮಾಡುವುದಾಗಿ ಲೋಕಲವಿವ ನ್ಯೂಸ ಮೂಲಕ ರೈತರು ಎಚ್ಚರಿಕೆ ನೀಡಿದ್ದಾರೆ.
By : ಪ್ರಸಾದ ಕೆ.