ಅಥಣಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ರಡೆರಹಟ್ಟಿ ಗ್ರಾಮದಲ್ಲಿ ಅಥಣಿ ಶಾಸಕರಾದ ಲಕ್ಷ್ಮಣ,ಸಂ,ಸವದಿಯವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಕುಮಾರಿ ಪ್ರಿಯಾಂಕ ಜಾರಕಿಹೊಳಿಯವರ ಪರ ಮತಯಾಚನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಣ ಸವದಿ ಅವರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿವೆ ಕೊಟ್ಟ ಮಾತಿನಂತೆ ನಡೆದುಕೊಂಡ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸಾವಿರಾರು ಮತಗಳ ಅಂತರದಿಂದ ಗೆಲ್ಲಿಸಬೇಕು ಮೋದಿಜಿ ಅವರ ಯಾವ ಕಾರ್ಯಕ್ರಮಗಳು ಜನರಿಗೆ ತಲುಪಿಲ್ಲ ಮನಸ್ಸಿಗೆ ಏನು ತೊಚುತ್ತೋ ಹಾಗೆ ಮಾತಾಡುತ್ತಿದ್ದು ಅವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಬುಟಾಳಿ, ಬಸಪ್ಪ ಖೋತ, ನ್ಯಾಯವಾದಿಗಳಾದ ಸುಶೀಲ ಪತ್ತಾರ, ಡಿ ಬಿ ಠಕ್ಕನ್ನವರ, ಅಶೋಕ ನಾಯಿಕ, ನಿಂಗಪ್ಪ ಖೋತ, ಕಾಕಾಸಾಬ ಖೋತ, ಮುರುಗೆಪ್ಪ ಭಾವಿ, ಕುಮಾರ ಗಲಗಲಿ, ಮಹಾದೇವ ಗಲಗಲಿ, ಬಿ ಬಿ ಬಿಸಲಾಪುರ, ಬಸು ಚನ್ನಾಪುರ, ಶ್ರೀಶೈಲ ಗಸ್ತಿ, ಬಾಬು ಹುಲ್ಯಾಳ, ಮಟ್ಟೆಪ್ಪನ್ನವರ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ರಡ್ಡೆರಹಟ್ಟಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ರಾಹುಲ್ ಮಾದರ