ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪನೆ ಮಾಡಲು ಹಿಂದೂ ಜನಜಾಗೃತಿ ಸಮಿತಿಯಿಂದ ಒತ್ತಾಯ

  • 15 Jan 2024 , 1:59 AM
  • Belagavi
  • 164

ಬೆಳಗಾವಿ :ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ, ಲವ್ ಜಿಹಾದ್ ಘಟನೆಗಳನ್ನು ತಡೆಯಲು ವಿಶೇಷ 'ಲವ್ ಜಿಹಾದ್ ವಿರೋಧಿ ಪೋಲಿಸ್ ದಳ'ವನ್ನು ಸ್ಥಾಪನೆ ಮಾಡಲು  ಹಿಂದೂ ಜನಜಾಗೃತಿ ಸಮಿತಿಯಿಂದ ಒತ್ತಾಯಿಸಿದ್ದಾರೆ.

ದೆಹಲಿಯ ಅಫ್ತಾಬ್‌ನು ಹಿಂದೂ ಯುವತಿ ಶ್ರದ್ದಾ ವಾಲ್ಕರ‌ಳನ್ನು ಲವ್‌ ಜಿಹಾದ್‌ಗೆ ಬೀಳಿಸಿ, ಅವಳೊಂದಿಗೆ 'ಲಿವ್-ಇನ್ ರಿಲೇಶನ್' ನಲ್ಲಿದ್ದು, ಆಕೆ ಮದುವೆಯಾಗಲು ಒತ್ತಾಯಿಸಿದ ನಂತರ, ಅವಳನ್ನು ಕ್ರೂರವಾಗಿ ಹತ್ಯೆ ಮಾಡಿ, ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸುತ್ತಾನೆ. 

ಈ ಘಟನೆಯು ಲವ್-ಜಿಹಾದಿ ಅಫ್ತಾಬನ ಕಾಮ, ಕ್ರೌರ್ಯ ಮತ್ತು ವಿಕೃತ ಮನಸ್ಥಿತಿಯನ್ನು ತಿಳಿಸುತ್ತದೆ. ಈ ಘಟನೆಯಿಂದಾಗಿ ದೇಶಾದ್ಯಂತ ತೀವ್ರ ಆಕ್ರೋಶದ ಅಲೆ ಹಬ್ಬಿದೆ. ಇದು ಮೊದಲ ಘಟನೆಯಾಗಿರದೆ, ಈ ಹಿಂದೆ ಕರ್ನಾಟಕದಲ್ಲೂ ಇಂತಹ ಅನೇಕ ಘಟನೆಗಳು ನಡೆದಿವೆ. ಮಾರ್ಚ್ 2022 ರಂದು ಗದಗದಲ್ಲಿ ಅಪೂರ್ವ ಎನ್ನುವ ಎಮ್‌ಬಿಎ ಓದುವ ಯುವತಿಗೆ ಜಿಹಾದಿ, ಆಟೋ ಡ್ರೈವರ್ ಇಜಾಜ್ ಆಕೆಯನ್ನು ಅರ್ಫಾಭಾನು ಎಂದು ಇಸ್ಲಾಮ್‌ಗೆ ಮತಾಂತರ ಮಾಡಿ, ತದನಂತರ ಆಕೆಯ ಮೇಲೆ 25 ಬಾರಿ ಚಾಕುವಿನಿಂದ ಇರಿದು ಆಕೆಯನ್ನು ಹತ್ಯೆ ಮಾಡಲು ಪ್ರಯತ್ನಿಸಿದ್ದನು.

ಕಳೆದ ವಾರ ರಾಯಚೂರಿನ ಸುಹಾಸಿನಿ ಎಂಬ ವಿವಾಹಿತ ಮಹಿಳೆಯನ್ನು ಸಲೀಮ್ ಎನ್ನುವ ಜಿಹಾದಿ ಬ್ರೈನ್  ವಾಷ್ ಮಾಡಿ ಅಪಹರಿಸಿ, ಮತಾಂತರ ಮಾಡಿದ ಘಟನೆಯು ನಡೆದಿದೆ, ತದನಂತರ ಡಿಸೆಂಬರ್ 2 ರಂದು ರಾಯಚೂರಿನಲ್ಲಿ ಪುನಃ ವಿವಾಹ ನಿಶ್ಚಿತವಾಗಿದ್ದ ಭಾರತಿ ಎನ್ನುವ ಯುವತಿಯನ್ನು ರಿಹಾನ್ ಎನ್ನುವ ಮುಸ್ಲಿಂ ಜಿಹಾದಿಯು ಹೈದರಾಬಾದ್‌ಗೆ ಅಪಹರಣ ಮಾಡಿ, ಆಕೆಯನ್ನು ಮತಾಂತರ ಮಾಡಿ ನಿಖಾಹ ಮಾಡಿದ ಘಟನೆಯು ಜರುಗಿದೆ. 

ಈ ರೀತಿಯಲ್ಲಿ ಕರ್ನಾಟಕದ ಮಂಗಳೂರು, ಬೆಂಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಇದೇ ರೀತಿಯ ಲವ್ ಜಿಹಾದ್ ಪ್ರಕರಣಗಳು ಬೆಳಕಿಗೆ ಬಂದಿವೆ. ಒಟ್ಟಿನಲ್ಲಿ ರಾಜ್ಯದಲ್ಲಿ 'ಲವ್ ಜಿಹಾದ್' ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಹಿಂದೂ ಹೆಣ್ಣುಮಕ್ಕಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ. ಇದರಲ್ಲಿ ಹಿಂದೂ ಹುಡುಗಿಯರು ಭಯಾನಕವಾಗಿ ಶೋಷಣೆಗೆ ಒಳಗಾಗುತ್ತಾರೆ. ಆದರೆ, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಇದ್ದರೂ ಸಹ ವ್ಯಾಪಕವಾಗಿ ಲವ್‌ ಜಿಹಾದ್‌ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಘಟನೆಗಳು ನಡೆಯುತ್ತಿವೆ. ಈ ಗಂಭೀರ ಸಮಸ್ಯೆಗೆ ಪರಿಹಾರವಾಗಿ ರಾಜ್ಯದಲ್ಲಿ ಸಹ ಉತ್ತರ ಪ್ರದೇಶದ ಮಾದರಿಯಲ್ಲಿ ಮತಾಂತರ ನಿಷೇಧ ಕಾಯಿದೆಯನ್ನು ಕಠಿಣವಾಗಿ ಅನುಷ್ಠಾನ ಮಾಡಲು ವಿಶೇಷ 'ಲವ್ ಜಿಹಾದ್ ವಿರೋಧಿ ಪೊಲೀಸ್ ದಳ' ವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸುತ್ತೇವೆ.

1. ಮೇ 2022 ರಂದು ಉಡುಪಿಯ ಕೋಟೆಶ್ವರದಲ್ಲಿ 25 ವರ್ಷದ ಶಿಲ್ಪಾ ದೇವಾಡಿಗ ಎನ್ನುವ ಯುವತಿಯನ್ನು ಅಜಿಜ್ ಎನ್ನುವ ಇಸ್ಲಾಮಿಕ್ ಜಿಹಾದಿಯು ಪ್ರೀತಿಯ ನಾಟಕವಾಡಿ, ಆಕೆಯನ್ನು ಮದುವೆಯಾಗುವ ಭರವಸೆ ನೀಡಿ, ಆಕೆಯನ್ನು ಲೈಂಗಿಕವಾಗಿ ಬಳಸಿ, ಆಕೆಯ ನಗ್ನ ವಿಡಿಯೋ ತೆಗೆದು, ಬ್ಲಾಕ್ ಮೇಲ್ ಮಾಡಿ. ಇಸ್ಲಾಮ್‌ಗೆ ಮತಾಂತರ ಮಾಡಲು ಪ್ರಯತ್ನಿಸಿದಾಗ, ಆಕೆಯು ಇಲಿಯ ಪಾಷಣ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಳು.

2. ಜನವರಿ 2022 ರಂದು ದೀಪ್ತಿ ಮರ್ಲಾ ಎನ್ನುವ ಕೊಡಗಿನ ದಂತ ವೈದ್ಯಕೀಯ ವಿಧ್ಯಾರ್ಥಿನಿಯು ಮಂಗಳೂರಿನಲ್ಲಿ ವ್ಯಾಸಂಗ ಮಾಡುವಾಗ ಅಬ್ದುಲ್ ರೆಹಮಾನ್ ಎನ್ನುವವನು ಆಕೆಯನ್ನು ಇಸ್ಲಾಮ್‌ಗೆ ಮತಾಂತರ ಮಾಡಿದನು ಮತ್ತು ತದನಂತರ ಆಕೆಯನ್ನು ಐಸಿಸ್ ಭಯೋತ್ಪಾಧನಾ ಚಟುವಟಿಕೆಯಲ್ಲಿ ತೊಡಗಿಸಿದಾಗ ಆಕೆಯನ್ನು ರಾಷ್ಟ್ರೀಯ ತನಿಖಾ ದಳವು ಬಂಧನ ಮಾಡಿದೆ.

3. ಮಂಗಳೂರಿನ ಆಶಾ ಎಂಬ ಹಿಂದೂ ಯುವತಿಯು ಜುಬೇರ್ ಎಂಬ ಮುಸ್ಲಿಮ್ ಯುವಕನ ಮದುವೆಯಾದ ನಂತರ ಆಕೆ ಆಯೆಶಾ ಭಾನು ಆಗಿ ಮತಾಂತರವಾದಳು. ತದನಂತರ ಆಕೆಯ ಹೆಸರಲ್ಲಿ 35 ಬ್ಯಾಂಕ್ ಅಕೌಂಟ್‌ಗಳನ್ನು ತೆರೆಯಲಾಗಿತ್ತು. ಅದರ ಮೂಲಕ ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಚಟುವಟಿಕೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು ಆಕೆಯನ್ನು ಬಂಧನ ಮಾಡಿತ್ತು.

4. ನವೆಂಬರ್ 2022 ರಂದು ಮಂಡ್ಯದಲ್ಲಿ ಯುನುಸ್ ಪಾಶಾ ಎನ್ನುವವನು ಹಿಂದೂ ಎಂದು ಸುಳ್ಳು ಹೆಸರು ಹೇಳಿ 13 ವರ್ಷದ ಹಿಂದೂ ಬಾಲಕಿಗೆ ಫೋನ್‌ಗಳನ್ನು ನೀಡಿ, ಆಕೆಯ ಅತ್ಯಾಚಾರ ಮಾಡಿ, ನಂತರ ಆಕೆಗೆ ಇಸ್ಲಾಮ್‌ಗೆ ಮತಾಂತವಾಗಲು ಬ್ಲಾಕ್ ಮೇಲ್ ಮಾಡಿದ ಘಟನೆ ನಡೆಯಿತು.

5. ಅಕ್ಟೋಬರ್ 2022 ರಂದು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಶಿವಮೊಗ್ಗದಲ್ಲಿ 'ಶಾಹಿನ್ ಗ್ಯಾಂಗ್' ಎನ್ನುವ ಮುಸ್ಲಿಂ ಯುವತಿಯರ ಗುಂಪು ನಿಷೇದಿತ 'ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮತ್ತು 'ಪಾಪ್ಯುಲರ್ ಆಫ್ ಇಂಡಿಯಾ' ಅಡಿಯಲ್ಲಿ ತರಬೇತಿ ಪಡೆದು ಕಾಲೇಜುಗಳಲ್ಲಿ ಹಿಂದೂ ಯುವತಿಯರನ್ನು ಮುಸಲ್ಮಾನ್ ಯುವಕರಿಗೆ ಪರಿಚಯ ಮಾಡಿಸಿ, ಅವರನ್ನು ಲವ್ ಜಿಹಾದ್‌ಗೆ ಬೀಳುವ ಹಾಗೆ ಪ್ರಚೋಧನೆ ಮಾಡಿ, ಅವರನ್ನು ಇಸ್ಲಾಂಗೆ ಮತಾಂತರ ಮಾಡುವ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ, ಸ್ಥಳೀಯ ಪೊಲೀಸರು ತನಿಖಾ ವರದಿಯಲ್ಲಿ ತಿಳಿಸಿರುತ್ತಾರೆ.

6. ರಾಷ್ಟ್ರೀಯ ಶೂಟರ್ 'ತಾರಾ ಸಹದೇವ್‌'ರನ್ನು ಮತಾಂಧ ರಾಕಿಬುಲ್ ಎಂಬಾತ ತಾನು ಹಿಂದೂ ಎಂದು ಸುಳ್ಳು ಹೇಳಿ ಅವಳನ್ನು ವಂಚಿಸಿ ಮದುವೆಯಾದನು. ಮದುವೆಯ ನಂತರ ಆಕೆಗೆ ನಿಜವಾದ ಹೆಸರನ್ನು ಹೇಳಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದರು. ಈ ವಿಷಯ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದ್ದಂತೆಯೇ 'ಲವ್ ಜಿಹಾದ್' ಎಂಬ ಭಯಾನಕ ವಾಸ್ತವ ದೇಶದ ಮುಂದಾಯಿತು.

7. ಅಲ್ಲದೆ, ಕೇರಳದಲ್ಲಿ 2006 ರಿಂದ 2009 ರವರೆಗೆ ಸುಮಾರು 3 ರಿಂದ 4 ಸಾವಿರ ಯುವತಿಯರನ್ನು 'ಲವ್‌ ಜಿಹಾದ್' ಮೂಲಕ ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದೆ. ಇದಕ್ಕಾಗಿ ಕೊಲ್ಲಿ ರಾಷ್ಟ್ರಗಳಿಂದಲೂ ಹಣ ನೀಡಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಇದು ಕೇವಲ ಕೇರಳ ರಾಜ್ಯಕ್ಕೆ ಮಾತ್ರ ಸೀಮಿತವಾಗಿರದೆ ಕರ್ನಾಟಕ, ಉತ್ತರ ಪ್ರದೇಶ ವಿವಿಧ ರಾಜ್ಯಗಳಲ್ಲೂ ಇದರ ಜಾಲ ಹಬ್ಬಿದೆ. 

8.2006 ರಲ್ಲಿ 2,667 ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ಕೇರಳದ ಅಂದಿನ ಮುಖ್ಯಮಂತ್ರಿ ಉಮನ್ ಚಾಂಡಿ ಅವರು ವಿಧಾನಸಭೆಯಲ್ಲಿ ತಿಳಿಸಿದ್ದರು. ಅಲ್ಲದೆ, 2009 ಮತ್ತು 2012 ರ ನಡುವೆ 2,195 ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ.

9. ಕರ್ನಾಟಕದಲ್ಲಿ 2014 ರಿಂದ 2019 ರ ವರೆಗೆ 21,000 ಯುವತಿಯರು ನಾಪತ್ತೆಯಾಗಿದ್ದಾರೆ.

10. ಕೇವಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಕಳೆದ ಒಂದು ವರ್ಷದಲ್ಲಿ 324 ಮಹಿಳೆಯರು ನಾಪತ್ತೆಯಾಗಿದ್ದಾರೆ. ಹಲವು ಜಿಲ್ಲೆಗಳಿಂದ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯ ಪ್ರಕಾರ, ಮಹಿಳೆಯರ ಕೌಟಂಬಿಕ ದೌರ್ಜನ್ಯದ ಅಪರಾಧಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಮಹಿಳೆಯರ ಅಪಹರಣ ಮತ್ತು ಮಹಿಳೆಯರನ್ನು ಆತ್ಮಹತ್ಯೆಗೆ ಪ್ರೇರೇಪಿಸುವುದು, ಅತ್ಯಾಚಾರ ಉದ್ದೇಶದಿಂದ ಮಹಿಳೆಯರ ಮೇಲೆ ಹಲ್ಲೆಗಳು ಮತ್ತು ಮಹಿಳೆಯರ ಮಾನಹಾನಿಯ ಪ್ರಕರಣಗಳಲ್ಲಿ ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣವಾಗಿದೆ.

11. ಮತಾಂತರವನ್ನು ತಡೆಯಲು ಇಂದು ರಾಜ್ಯದಲ್ಲಿ ಕಾಯಿದೆ ಇದ್ದರೂ ಸಹ ಲವ್ ಜಿಹಾದ್ ತಡೆಯಲು ಸಾದ್ಯವಾಗುತ್ತಿಲ್ಲ. ಅನೇಕ ಲವ್ ಜಿಹಾದ್ ಘಟನೆಗಳು ಮತಾಂತರ ಪ್ರಕರಣವೆಂದು ದಾಖಲಾಗುವುದಿಲ್ಲ. 

12. ಟ್ಯುಶನ್ ತರಗತಿಗಳು, ಶಾಲಾ-ಕಾಲೇಜುಗಳು, ಮೊಬೈಲ್ ರೀಚಾರ್ಜ್ ಸ್ಥಳಗಳು, ಕಾಲ್ ಸೆಂಟರ್‌ಗಳು, ಬ್ಯೂಟಿ
ಪಾರ್ಲ‌್ರಗಳು ಅಥವಾ ಸ್ಪಾ ಸೆಂಟರ್‌ಗಳಂತಹ ಅನೇಕ ಸ್ಥಳಗಳಲ್ಲಿ ಮುಸ್ಲಿಂ ಯುವಕರು ಲವ್ ಜಿಹಾದ್‌ಗೆ ಬಲೆ ಬೀಸುತ್ತಾರೆ.

13. ಮದರಸಾಗಳು ಅಥವಾ ಮಸೀದಿಗಳ ಮೂಲಕ ಮುಸ್ಲಿಂ ಯುವಕರನ್ನು ಹೆಚ್ಚಾಗಿ 'ಲವ್ ಜಿಹಾದ್'ಗೆ ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಮುಸ್ಲಿಂ ಯುವಕರಿಗೆ ಮುಸ್ಲಿಮೇತರ ಹುಡುಗಿಯರನ್ನು ಬಲೆಗೆ ಬೀಳಿಸಲು ದುಬಾರಿ ದ್ವಿಚಕ್ರ ವಾಹನಗಳು, ದುಬಾರಿ ಮೊಬೈಲ್, ಉತ್ತಮ ಬಟ್ಟೆ ಸೇರಿದಂತೆ ಹುಡುಗಿಯರಿಗೆ ಖರ್ಚು ಮಾಡಲು ಹಣ ನೀಡಲಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಮುಸ್ಲಿಂ ಯುವಕರಿಗೆ ಆಮಿಷವೊಡ್ಡಿ ಇತ್ತೀಚೆಗೆ ನಿಷೇಧಿತ PFI ಸಂಘಟನೆಯು ಹಣ ನೀಡುತ್ತದೆ ಎಂಬುದು ಪಿಎಫ್‌ಐ ತನಿಖೆಯ ಸಮಯದಲ್ಲಿ ಗಮನಕ್ಕೆ ಬಂದಿದೆ.

ಒಟ್ಟಿನಲ್ಲಿ ಹಿಂದೂ ಯುವತಿಯರನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ವಂಚಿಸಿ, ಮತಾಂತರ ಮಾಡುವುದು. ಮದುವೆಯಾಗುವುದು, ನಿರಾಕರಿಸಿದರೆ ಅತ್ಯಾಚಾರವೆಸಗುವುದು, ಬ್ಲ್ಯಾಕ್ ಮೇಲ್ ಮಾಡುವುದು, ಹಣ ವಸೂಲಿ ಮಾಡುವುದು, ಹತ್ಯೆ ಮಾಡುವುದು, ಹೀಗೆ ಹಲವಾರು ಗಂಭೀರ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಘಟನೆಗಳು ಈಗ ಸಾಮಾನ್ಯವಾಗಿವೆ. ಈ ಮತಾಂದರು ಹಿಂದೂ ಹೆಣ್ಣುಮಕ್ಕಳನ್ನು ಅಪಹರಿಸಲು ಹಿಂದೂಗಳ ಮನೆಗಳನ್ನು ತಲುಪಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ರಾಜ್ಯ ಸರಕಾರ ಮುಂದಾಗಬೇಕು. ಇದು ರಾಜ್ಯದ ಭವಿಷ್ಯದ ಪೀಳಿಗೆಯ ಪ್ರಶ್ನೆಯಾಗಿದೆ. 

ಈ ನಿಟ್ಟಿನಲ್ಲಿ ಈ ಮುಂದಿನ ಬೇಡಿಕೆಯನ್ನು ಮುಂದಿಟ್ಟಿದ್ದಾರೆ

1. ರಾಜ್ಯದಿಂದ ಮಹಿಳೆಯರು ಮತ್ತು ಹುಡುಗಿಯರ ನಾಪತ್ತೆಯ ಹಿಂದೆ ಏನಾದರೂ ಪಿತೂರಿ ಇದೆಯೇ ಅಥವಾ ಅದರ
ಹಿಂದೆ ಯಾವುದಾದರೂ 'ಲವ್ ಜಿಹಾದ್' ಮಾಫಿಯಾ ಇದೆಯೇ ಎಂದು ತನಿಖೆ ಮಾಡಲು ಗೃಹ ಕಚೇರಿ ಸ್ವತಂತ್ರ ತಂಡವನ್ನು ನೇಮಿಸಬೇಕು.

2. 'ಲವ್ ಜಿಹಾದ್' ಪ್ರಕರಣಗಳನ್ನು ವ್ಯವಹರಿಸಲು ಅಥವಾ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ 'ಪೊಲೀಸ್ ವಿಶೇಷ ಶಾಖೆ'ಯನ್ನು ಸ್ಥಾಪಿಸಬೇಕು. ಇಂತಹ ಪ್ರಕರಣಗಳಲ್ಲಿ 'ಲವ್ ಜಿಹಾದ್' ಹೆಸರಿನಲ್ಲಿ ಅಪರಾಧಗಳನ್ನು
ದಾಖಲಿಸಬೇಕು.

3. 'ಲವ್ ಜಿಹಾದ್'ಗೆ ವಿದೇಶಿ ಧನಸಹಾಯ, ಯುವತಿಯರ ಸಾಗಾಣಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಅವರನ್ನು ಬಳಸಿಕೊಳ್ಳುವ ಬಗ್ಗೆಯೂ ಸರ್ಕಾರ ತನಿಖೆ ನಡೆಸಬೇಕು ಮತ್ತು ಅದರಲ್ಲಿ ಪತ್ತೆಯಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

4. ಲವ್ ಜಿಹಾದ್ ಪ್ರಕರಣಗಳಲ್ಲಿ ಪಿಎಪ್‌ಐನ ಶಾಹಿನ್ ಗ್ಯಾಂಗ್ ಎಂಬ ಮುಸಲ್ಮಾನ ಯುವತಿಯರ ಸಂಘಟನೆ,
ಮದರಸಾ ಮತ್ತು ಮಸೀದಿಗಳ ಮೌಲ್ಯಗಳು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ. ಅಂತಹ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು ಮತ್ತು ತಕ್ಷಣವೇ ನಿಷೇಧಿಸಬೇಕು ಎಂದು ಹೇಳಿದ್ದಾರೆ.

Read All News