ಮದ್ಯಪಾನ ಪ್ರೀಯರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

  • shivaraj bandigi
  • 15 Jan 2024 , 11:31 AM
  • Belagavi
  • 547

ಬೆಳಗಾವಿ :

ಕರ್ನಾಟಕ ಮದ್ಯಪಾನ ಪ್ರೀಯರ ಹೋರಾಟಗಾರ ಸಂಘದ ವಿವಿಧ 20 ಬೇಡಿಕೆಯನ್ನು ಈಡೇರಿಸುಂತೆ ಆಗ್ರಹಿಸಿ ಗುರುವಾರ ಇಲ್ಲಿನ ಸುವರ್ಣ ಗಾರ್ಡನ್ ಬಳಿ ಪ್ರತಿಭಟನೆ ನಡೆಸಿ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಮಿಕ ಮಂಡಳಿಯ ಪ್ರಕಾರ ಮದ್ಯಪಾನ ಪ್ರೀಯರ ಕಲ್ಯಾಣ ನಿಧಿ ಸ್ಥಾಪಿಸುವುದು ಮತ್ತು ವಾರ್ಷಿಕ ಆದಾಯದಲ್ಲಿ ಶೇ.10 ರಷ್ಟು ಕಲ್ಯಾಣ ನಿಧಿಗೆ ವರ್ಗಾಯಿಸುವುದು, ಮದ್ಯಪಾನ ಪ್ರೀಯರ ಪ್ರತಿಭಾವಂತ ಮಕ್ಕಳಿಗೆ ಸರಕಾರದಿಂದ ಮಾಶಾಸನ ನೀಡಬೇಕೆಂದು ಒತ್ತಾಯಿಸಿದರು.

ಮದ್ಯಪಾನ ಸಂಘದ ಅಧ್ಯಕ್ಷ ವೆಂಕಟೇಶ ಗೌಡ ಬೋರೆಹಳ್ಳಿ, ರಾಮಸ್ವಾಮಿ, ಮೋಹನ ನಾಯಕ, ಎ.ಎಂ.ಸಿದ್ದೇಶ ಉಪಸ್ಥಿತರಿದ್ದರು.

Read All News