ಸಿರವಾರ : ಭತ್ತ ಸಂಗ್ರಹ ಮಾಡಿರುವ ಗೋದಾಮಿನ ಟನ್ ಗೆ ವಿದ್ಯುತ್ ವೈರ್ ಗಳು ತಾಗಿ ಬೆಂಕಿ ಕಾಣಿಸಿಕೊಳುತ್ತಿದ್ದೂ, ಸಂಗ್ರಹ ಮಾಡಿರುವ ಭತ್ತವು ಬೆಂಕಿಗೆ ಆಗುತಿಯಾಗುತ್ತವೆ ಎಂಬ ಬೀತಿಯಲ್ಲಿ ರೈತರು ಇದ್ದಾರೆ, ಈ ವಿದ್ಯುತ್ ಕಂಬ, ವೈರ್ ಸ್ಥಳಾಂತರ ಮಾಡುವಂತೆ ಗೋದಾಮು ಮಾಲಿಕ ಹಾಗೂ ರೈತರಾದ ಮಹಮ್ಮದ್ ಹುಸೇನ್ ಜೆಸ್ಕಾಂ ಅದಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪಟ್ಟಣದ ಯಂಕನಗಡ್ಡೆ ಕ್ಯಾಂಪಿನ ರಸ್ತೆಯಲ್ಲಿರುವ ಮದಿನಾ ಮಸ್ಜಿದಿಯ ಹತ್ತಿರ ನನ್ನ ಗೋದಾಮು ಇದೆ, ಅದರಲ್ಲಿ ಭತ್ತ, ಜೋಳ, ಹತ್ತಿ ಶೇಖರಣೆ ಮಾಡುತ್ತೆನೆ. ಈ ಗೊದಾಮಿಗೆ ಹೊಂದಿಕೊಂಡು 11 ಕೆ.ವಿ ಸಾಮರ್ಥ್ಯದ ಲೈನ್ ಹೋಗಿದೆ. ಪಕ್ಕದಲ್ಲಿರುವ ಕಂಬದ ಸಿಮೆಂಟ್ ಸಹ ಹಾಳಾಗಿ ರಾಡುಗಳು ಕಾಣುತ್ತಿವೆ. ಗಾಳಿ ಬಿಟ್ಟರೆ ವಿದ್ಯುತ್ ವೈರುಗಳು ಗೊದಾಮು ಟಿನ್ ಗೆ ತಾಗಿ ಬೆಂಕಿ ಹತ್ತುತ್ತಿದೆ. ಗೋದಾಮಿನಲಿಟಿರುವ ಭತ್ತಕ್ಕೆ ಬೆಂಕಿ ಹಚ್ಚಿ ಹಾಳಾಗುತ್ತವೆ ಎಂಬ ಭಯ ಇದೆ. ಸುಮಾರ ೨೫ ಸಾವಿರಕ್ಕೂ ಅದಿಕ ಚೀಲಗಳು ರೈತರು ಶೇಖರಣೆ ಇವೆ ಬೆಂಕಿ ಬಿದ್ದರೆ 2 ಕೊ.75 ಲಕ್ಷದ ಮಾಲು ಹಾಳಾಗುತ್ತದೆ. ಎಇಇ, ಶಾಖಾಧಿಕಾರಿಗಳು ಬದಲಾವಣೆಯಾದಂತೆ ಈ ಕುರಿತು ಮನವಿ ಮಾಡಿಕೊಂಡರೆ ನನಗೆನೂ ಗೊತ್ತಿಲ, ಎಷ್ಟಿಮೆಂಟ್ ಮಾಡಿಸಿಕೊಂಡು ಹೋಗಿ ನೀವೆ ವೈರ್, ಕಂಬಗಳು ತನ್ನಿ ಎಂದು ಹೇಳುತ್ತಿದ್ದಾರೆ.
ಈ ವೈರ್ ಕಂಬ ಸ್ಥಳಾಂತರಕ್ಕೆ ಮಾಡಿಕೊಂಡ ಮನವಿಗೆ ಎರಡು ಬಾರಿ ಎಷ್ಟಿಮೆಂಟ್ ಮಾಡಲಾಗಿತು. ಆದರೆ ಮಂಜೂರಾದ ಕಂಬ, ವೈರ್ ಗಳು ಎಲಿ ಹಾಕಿದ್ದಾರೋ ಗೋತಿಲ. ನನ್ನ ಹೆಸರಿಗೆ ಮಂಜೂರಾದಂತಹ ವೈರ್ ಗಳನ್ನು ತುರ್ತು ಪರಸ್ಥಿತಿಯಲ್ಲಿ ತೆಗೆದುಕೊಂಡಿರಬಹುದು, ಆದರೆ ಮತ್ತೆ ನನ್ನ ಕೆಲಸ ಮಾಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದಾಗಿ ನಿತ್ಯ ರೈತರು ನನ್ನ ಮೆಲೆ ಒತ್ತಡ ಹಾಕುತ್ತಿದ್ದಾರೆ ಕೂಡಲೇ ವೈರ್, ಕಂಬ ಸ್ಥಳಾಂತರ ಮಾಡದೆ ಇದರೆ ಮುಂದೆ ಆಗುವ ಅನಾಹುತಕ್ಕೆ ಜೇಸ್ಕಾಂ ಅದಿಕಾರಿಗಳೆ ನೇರ ಹೊಣೆಯಾಗುತ್ತಾರೆ.