ಸಂಸತ್ತಿನ ಲೋಪದ ಬಗ್ಗೆ ಜನ ಖಂಡಿಸಿದ್ದಾರೆ ಎಂದ ಮಾಜಿ ಡಿಸಿಎಂ

  • shivaraj bandigi
  • 15 Jan 2024 , 3:04 AM
  • Belagavi
  • 491

ಬೆಳಗಾವಿ :

ಸಂಸತ್ ಮೇಲೆ ಭದ್ರತಾ ಲೋಪವನ್ನು ಕಾಂಗ್ರೆಸ್‌ನವರು ಏನೇ ಹೇಳಿದರೂ, ದೇಶದ ಜನತೆ ಖಂಡನೆ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಗೋವಿಂದ್ ಕಾರಜೋಳ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಸತ್ತಿನಲ್ಲಿ ಹೀಗೆ ಮಾಡುವವರು ದೇಶದ್ರೋಹಿಗಳ ಕೆಲಸ ಇದೆ. ಇದನ್ನು ಕೇಂದ್ರ ಸರಕಾರ ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತಿದೆ. ತನಿಖೆಯಾದ ಮೇಲೆ ಎಲ್ಲ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದರು.

ಕಾಂಗ್ರೆಸ್ ಸಿಎಲ್‌ಪಿ ಸಭೆಗೆ ಬಿಜೆಪಿ ನಾಯಕರು ಹೋಗಿದ್ದ ವಿಚಾರಕ್ಕೆ ಉತ್ತರಿಸಿದ ಅವರು, ಅವರು ಅಧಿಕೃತವಾಗಿ ಬಿಜೆಪಿ ಬಿಟ್ಟು ಹೋಗಿಲ್ಲ. ಅವರು ಹೋಗಿದ್ದು ನನಗೆ ತಿಳಿದಿಲ್ಲ ಎಂದರು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಆರು ತಿಂಗಳಾಗಿದೆ. ಆದರೂ ಕೂಡ ಹೊಸ ಯೋಜನೆಗಳಿಗೆ ಚಾಲನೆ ನೀಡಿಲ್ಲ. ಕೇವಲ ಚುನಾವಣೆಗಾಗಿ ಕೊಟ್ಟಿರುವ ಭರವಸೆಗಳನ್ನು ಈಡೇರಿಕೆಗಾಗಿ ತಡವರಿಸುತ್ತಿದ್ದೆ.

ಎಲ್ಲ ಮಹಿಳೆಯರಿಗೆ ಎರಡು ಸಾವಿರ ಹಣ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ಅದು ಸಹ ಪೂರ್ಣಗೊಂಡಿಲ್ಲ. ನಿರುದ್ಯೋಗ ಯುವಕರಿಗೆ ಹಣ ಕೊಡುತ್ತೇವೆ ಎಂದಿದ್ದರೂ ಅದು ಸಹ ಆಗಿಲ್ಲ. ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲರಿಗೂ ಕೊಡುವಂತೆ ಒತ್ತಾಯ ಮಾಡುತ್ತೇವೆ ಎಂದರು.

ನಿನ್ನೆಯಿಂದ ಸರಕಾರದ ವಿರುದ್ಧ ಹೋರಾಟ ಪ್ರಾರಂಭ ಮಾಡಿದ್ದೇವೆ. ನಮ್ಮ ಸರಕಾರ ಇದ್ದಾಗ ಬೆಳಗಾವಿಗೆ 22 ಸಾವಿರ ಕೋಟಿ ರೂಗಳನ್ನು ಕಾಮಗಾರಿಗಳಿಗಾಗಿ ಮೀಸಲಿಟ್ಟಿತ್ತು.

ಸರಕಾರ ಕಾಂಟ್ರ್ಯಾಕ್ಟರ್‌ ಕಡೆಯಿಂದ ಪರ್ಸೆಂಟೆಜ್ ಕೇಳುತ್ತಿದ್ದಾರೆ. ನನ್ನ ಅನುಭದಲ್ಲಿಯೇ ಇಷ್ಟೊಂದು ಭ್ರಷ್ಟ ಸರಕಾರ ನೋಡಿಲ್ಲ ಎಂದರು‌.

Read All News