ಮೂಡಲಗಿ : ಸ್ಥಳೀಯ ಡಾ|| ಹೊಂಗಲ ಆಸ್ಪತ್ರೆಯಲ್ಲಿ ರವಿವಾರ ಡಿ. ೨೪ ರಂದು ಮುಂಜಾನೆ ೧೦ ರಿಂದ ೨.೦೦ ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ನಿವೃತ್ತ ಉಪನ್ಯಾಸಕ ಅರ್ಜುನ ಹೊಂಗಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸ್ತ್ರೀರೋಗ(ಹೆರಿಗೆ),ಚಿಕ್ಕ ಮಕ್ಕಳ ತಪಾಸಣೆ, ಶಸ್ತ್ರ ಚಿಕಿತ್ಸಾ ತಪಾಸಣೆ ಅಪೆಂಡಿಕ್ಷ, ಹರ್ನಿಯಾ, ಮೂಲವ್ಯಾದಿ, ಸ್ಥನ ಗಂಟು ಸಹಿತ ಇತರೆ ಶಸ್ತ್ರ ಚಿಕಿತ್ಸೆ ಸಂಬoದಿಸಿದ ಖಾಯಿಲೆಗಳನ್ನು ರಿಯಾಯತಿ ನೀಡುವ ಮೂಲಕ ಪರಿಹರಿಸುವರು.
ಶಿಬಿರದಲ್ಲಿ ಎಲಬು ಕೀಲುಗಳ ತಜ್ಞ ಡಾ. ಪ್ರವೀಣಕುಮಾರ ಹೊಂಗಲ, ನವಜಾತ ಶಿಶು ತಜ್ಞ ಡಾ. ಗೋಪಾಲ ಹೊಂಗಲ, ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ. ಲಲಿತಾ ಹೊಂಗಲ, ಜನರಲ್ ಸರ್ಜನ್ ಡಾ.ಸಚೀನ ಬೆನಚಿನಮರಡಿ ಹಾಗೂ ತಜ್ಞರು ಭಾಗವಹಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಗೋಕಾಕ ರಸ್ತೆ ಮೂಡಲಗಿ ಪೊಲೀಸ್ ಠಾಣೆ ಎದುರಿಗೆ ಪೋ ನಂ: ೮೨೧೭೫೫೬೯೮೬, ೯೧೪೮೬೯೦೧೧೮, ೭೭೯೫೮೧೮೪೮೩ ಸಂಪರ್ಕಿಲು ಕೋರಿದ್ದಾರೆ.