ಕಬ್ಬು ಕಟಾವು ಮಶೀನಿನ ಸಹಾಯಧನವನ್ನು ಆದಷ್ಟು ಬೇಗನೆ ಪಾವತಿಸಬೇಕೆಂದು F.S ಸಿದ್ದನಗೌಡರರಿಂದ ಸರ್ಕಾರಕ್ಕೆ ವಿನಂತಿ

  • 7 Jan 2024 , 5:10 AM
  • Belagavi
  • 156

ಬೆಳಗಾವಿ :ಕರ್ನಾಟಕದ ರೈತರು ಮತ್ತು ಕಬ್ಬು ಕಟಾವು ಮಶೀನಿನ ಎಲ್ಲ ಮಾಲೀಕರ ಪರವಾಗಿ ಅತ್ಯಂತ ಮಹತ್ವದ ವಿಷಯವನ್ನು ತಮ್ಮಲ್ಲಿ ತಿಳಿಸಲು ಬಯಸುತ್ತೇನೆ. ಕರ್ನಾಟಕ ಸರಕಾರದ ಕೃಷಿ ಇಲಾಖೆಯ 2020-21 ನೇ ಸಾಲಿನ ಸಬ್ಸಿಡಿಯನ್ನು ನಂಬಿ 2020-21 ನೇ ಸಾಲಿನಲ್ಲಿ ನಮ್ಮ ರಾಜ್ಯದಲ್ಲಿ ಬಹಳಷ್ಟು ರೈತರು ಕಬ್ಬು ಕಟಾವು ಮಶೀನಗಳನ್ನು ಖರೀಸಿದ್ದು, ಈ ಮಶೀನನ್ನು ಖರೀದಿಸಲು ರೈತರು ತಮ್ಮ ಕೃಷಿ ಭೂಮಿಯನ್ನು ಹಾಗೂ ಇನ್ನಿತರ ತಮ್ಮ ಬಹುಮೂಲ್ಯದ ವಸ್ತುಗಳನ್ನು ಬ್ಯಾಂಕಗಳಲ್ಲಿ ಅಡವಿಟ್ಟು ಕಬ್ಬು ಕಟಾವು ಮಶೀನನ್ನು ಖರೀಸಿದ್ದು ಆದರೆ ಕರೋನಾ ಹಾಗೂ ಮತ್ತಿತರೇ ಕಾರಣಾಂತರದಿಂದ ಸಬ್ಸಿಡಿಯು ಇನ್ನುವರೆಗೆ ಬಂದಿಲ್ಲ ಆದ ಕಾರಣ ರೈತರು ಆರ್ಥಿಕ ತೊಂದರೆ ಹಾಗೂ ನೋವಿನಲ್ಲಿ ಜೀವನ ಸಾಗಿಸಬೇಕಾಗಿದೆ.

ಲೋಕಲವಿವ ನ್ಯೂಸ್ ವರದಿಗಾರರಾಗಲು 8310635736 ಕರೆಮಾಡಿ

ಕೃಷಿ ಇಲಾಖೆಯಿಂದ ಕಬ್ಬು ಕಟಾವು ಯಂತ್ರಗಳಿಗೆ 2016 ರಿಂದ 2020ರ ವರೆಗೆ 182 ಮಶೀನಿನ ಸಬ್ಸಿಡಿ ಪ್ರತಿ ವರ್ಷದಲ್ಲಿ ಈ ಹಿಂದೆ ಸಿಕ್ಕಿದೆ, ಅದರ ವಿವರಣೆ ಈ ಕೇಳಗಿನಂತಿದೆ.

#ವರ್ಷಸರಕಾರದ ಸಹಾಯಧನ ಪಡೆದ ಕಬ್ಬು ಕಟಾವು ಮಶೀನಗಳ ಸಂಖ್ಯೆಯಲ್ಲಿ
12016-1716
22017-1841
32018-19101
42019-2024

ರೈತರು ಕಬ್ಬು ಕಟಾವು ಮಶೀನನ್ನು ಅದರ ಮೂಲ ಬೆಲೆಯನ್ನು ಪಾವತಿಸಿ ಸಂಭಂದಪಟ್ಟ ವಿತರಕರಿಂದ ಪಡೆದು ನಂತರ ಸರಕಾರದಿಂದ ಸಹಾಯಧನ ಪಡೆಯುವ ವ್ಯವಸ್ಥೆ ಇರುತ್ತದೆ (credit linked back ended financial assistance) ಆದರೆ 2020-21 ರಲ್ಲಿ ಕರೋನಾ ಮಹಾಮಾರಿಯ ರೋಗದ ಕಾರಣಾಂತರದಿಂದ ಇನ್ನೂವರೆಗೆ ಯಾವುದೇ ರೀತಿಯ ಸಹಾಯಧನ ಬಿಡುಗಡೆಯಾಗಿರುವುದಿಲ್ಲ ಹಾಗೂ ಸಂಭಂದಪಟ್ಟ ತಾಲೂಕಾ ಇಲಾಖೆಗಳಲ್ಲಿ ರೈತರ ಅರ್ಜಿಗಳನ್ನು online update ಕೂಡ ಕೃಷಿ ಇಲಾಖೆಗಳು ತೆಗೆದುಕೊಂಡಿಲ್ಲ. ಇದರಿಂದ ಸರಕಾರದ ಸಹಾಯಧನಕ್ಕಾಗಿ ರೈತರು ಕೃಷಿ ಇಲಾಖೆಗಳಲ್ಲಿ ಪರದಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಲೋಕಲವಿವ ನ್ಯೂಸನಲ್ಲಿ ಜಾಹಿರಾತುಗಳಿಗಾಗಿ 8904752259 ಕರೆಮಾಡಿ

ನಮ್ಮ ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಜಿಲ್ಲಾವಾರು ಮಶೀನಗಳ ಖರೀದಿಯ ವಿವರಣೆ ಈ ಕಳಗಿನಂತಿದೆ.

#ಜಿಲ್ಲೆಮಶೀನಗಳ ವಿವರಣೆ
1ಬೆಳಗಾವಿ51
2ಬಾಗಲಕೋಟ34
3ಬಳ್ಳಾರಿ1
4ಕಲಬುರುಗಿ15
5ಹಾವೇರಿ5
6ವಿಜಯಪುರ24

ಒಂದು ವೇಳೆ ಸಬ್ಸಿಡಿ/ಅನುದಾನ ಪ್ರತಿ ವರ್ಷದಂತೆ ನಿಯಮಿತವಾಗಿ ಬಂದರೆ, ಹಲವಾರು ರೈತರು ಈ ಅನುದಾನವನ್ನು ಬಳಸಿ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಕೂಡ ಹೆಚ್ಚಾಗುವ ಸಾದ್ಯತೆ ಇದೆ. 

ಒಂದು ಮಶೀನ ಸುಮಾರು ಜನರ ಜೀವನಕ್ಕೆ ಆಧಾರವಾಗುತ್ತದೆ ಹಾಗೂ ನಾವು ಹೊರ ರಾಜ್ಯಗಳ ಕಾರ್ಮಿಕರ ಮೇಲೆ ನಮ್ಮ ಅವಲಂಬನೆ ಕಡಿಮೆಯಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಉದ್ಯೋಗಳು ಸೃಷ್ಟಿಯಾಗುತ್ತವೆ ಮತ್ತು ರೈತರ ಸಮಯ ಕೂಡ ಉಳಿತಾಯವಾಗುತ್ತದೆ. 

ಆದ್ದರಿಂದ ಕರ್ನಾಟಕದ ರೈತರು ಮತ್ತು ಕಬ್ಬು ಕಟಾವು ಮಶೀನಿನ ಎಲ್ಲ ಮಾಲೀಕರ ಪರವಾಗಿ F S ಸಿದ್ದನಗೌಡರರವರು ಸರಕಾರದ ಸಹಾಯಧನವನ್ನು ಆದಷ್ಟು ಬೇಗನೆ ಪಾವತಿಸಬೇಕೆಂದು ವಿನಂತಿಸಿದ್ದಾರೆ.

Read All News