ಕೊಪ್ಪಳ : ಕಾರಟಗಿ ತಾಲೂಕ ಚಳ್ಳೂರು ಗ್ರಾಮದಲ್ಲಿ ನಡೆದ 7ನೇ ವರ್ಷದ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ 601ನೇ ಜಯಂತ್ಯೋತ್ಸವದಲ್ಲಿ ಗಾಲಿ ಜನಾರ್ಧನ್ ರೆಡ್ಡಿ ಭಾಗವಹಿಸಿ ಹೇಮರೆಡ್ಡಿ ಮಲ್ಲಮ್ಮನ ಆಶೀರ್ವಾದ ಪಡೆದಿದ್ದಾರೆ.
ಪೂರ್ಣಕುಂಭ ಹೊತ್ತು ರೆಡ್ಡಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಗ್ರಾಮದ ಮಹಿಳೆಯರು ಅದ್ದೂರಿ ಹಬ್ಬಕ್ಕೆ ಮತ್ತಷ್ಟು ಕಳೆ ತಂದಿದ್ದಾರೆ.
ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಭಾಗಿಯಾದ ಜನಾರ್ಧನ್ ರೆಡ್ಡಿಯವರು ಮಲ್ಲಮ್ಮ ತಾಯಿಯ ತ್ಯಾಗಗಳನ್ನು ನೆನೆಯವ ಮೂಲಕ ಅವರ ಆದರ್ಶಗಳನ್ನು ಪಾಲಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.