ರೈತರ ಅಭಿವೃದ್ಧಿಗೆ ಪನತೋಟ್ಟ ಗಾಲಿ ಜನಾರ್ದನ ರೆಡ್ಡಿ

  • Shivaraj Bandigi
  • 14 Jan 2024 , 11:52 PM
  • Koppal
  • 206

ಗಂಗಾವತಿ :ರೈತರು ದೇಶದ ಬೆನ್ನೆಲಬು, ಅವರ ಬೆನ್ನೆಲಬಾಗಿ ನಾನು ನಿಂತುಕೊಳ್ಳುತ್ತೇನೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಹೇಳಿದರು.

ಗಂಗಾವತಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಿರೇಜಂತಕಲ್ ಗ್ರಾಮದ ಬಳಿಯಲ್ಲಿ ಹೊಲ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಗಾಲಿ ಜನಾರ್ದನ ರೆಡ್ಡಿ, ರೈತರ ಜಮೀನುಗಳಿಗೆ  ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸುತ್ತೇನೆ. ಕೃಷಿಗೆ ಸಂಭವಿಸಿದ ಯಾವುದೇ ವಿಷಯಗಳು ಇದ್ದರೂ ನನ್ನ ಗಮನಕ್ಕೆ ತನ್ನಿ ಅವುಗಳನ್ನು ಪರಿ ಹರಿಸಿ ಕೊಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಕೆಲ ರೈತರು, ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಯಾವುದೇ ರೀತಿಯ ಮಾಹಿತಿಯನ್ನು ಕೊಡುವುದಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಹೆಚ್ ಆರ್ ಶ್ರೀನಾಥ್, ಸಂಗಟಿ ಕರಿಯಣ್ಣ,   
ಮನೋಹರ ಗೌಡ ಹೇರೂರು, ರಾಘವೇಂದ್ರ ಶೆಟ್ಟಿ, ರಾಜೇಶ್ ಬಿ, ಅಮಾತೆಪ್ಪ, ಸುದರ್ಶನ ವರ್ಮಾ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News