ಅದ್ದೂರಿಯಾಗಿ ವಿಸರ್ಜನೆಗೊಂಡ ಪಾರ್ವತಿ ನಗರದ ಗಣೇಶ ಮೂರ್ತಿ

  • shivaraj B
  • 16 Sep 2024 , 8:58 PM
  • Belagavi
  • 355

ಬೆಳಗಾವಿ: ನಗರದ ಬಿ.ಕೆ. ಕಂಗ್ರಾಳಿಯ ಪಾರ್ವತಿ ನಗರದಲ್ಲಿ  ಪ್ರತಿಷ್ಠಾಪನೆಗೊಳಿಸಿದ ಗಣೇಶ ಮೂರ್ತಿಯ ವಿಸರ್ಜನೆಯು ಅದ್ದೂರಿ ವಿಜೃಂಭಣೆಯಿಂದ ನಡೆಯಿತು. ಮಹಾಪ್ರಸಾದ,  ಮಕ್ಕಳಿಂದ ರಂಗೋಲಿ ಸ್ಪರ್ಧೆ, ನೃತ್ಯ, ಮ್ಯೂಸಿಕ್ ಚೆರ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು ಯುವಕರು ಮತ್ತು ಹಿರಿಯರು ಕೂಡಾ ಹೆಜ್ಜೆ ಹಾಕಿ ಸಂಭ್ರಮಿಸಿದರು. ಟ್ಯಾಕ್ಟರ್ ಪಾದಯಾತ್ರೆಗಳ ಮೂಲಕ ಗಣೇಶ ಮೂರ್ತಿಯ ಅದ್ದೂರಿ ಮೆರವಣಿಗೆ ನಡೆಯಿತು.

ದಾರಿಯುದ್ಧಕ್ಕೂ ಗಣಪತಿ ಬಪ್ಪ ಮೋರೆಯಾ ಎಂಬ ಘೋಷಣೆಗಳು ಸೇರಿದಂತೆ ಪರಸ್ಪರ ಗುಲಾಲು ಎರಚಿಕೊಂಡು ಯುವಕರು ಅಷ್ಟೇ ಅಲ್ಲದೇ ವಯಸ್ಕರು ಡಿಜೆ ಧ್ವನಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ್ದು ಮಾತ್ರ ವಿಶೇಷವಾಗಿತ್ತು ರಂಗುರಂಗಿನ ವಿದ್ಯುತ್‌ ದೀಪಗಳು, ಭಕ್ತಿಗೀತೆಗಳು, ನೃತ್ಯಗೀತೆಗಳು, ಹೀಗೆ  ಸಂಗೀತದಲ್ಲಿ ತೇಲಾಡಿಕೊಂಡು, ಓಲಾಡಿಕೊಂಡು ಯುವಕರು ಗಣೇಶನನ್ನು ವಿಸರ್ಜನೆ ಮಾಡಿದರು ಈ ಸಂದರ್ಭದಲ್ಲಿ ರಾಹುಲ್ ಕೋಳಿ, ಶುಭಂ ಕೋಳಿ, ವೈಜು ಅಡವಾ, ಪಾಂಡುರಂಗ ಪಾವಸೆ, ಶ್ರಿದರ ಕೋಳಿ, ಮೋಹನ ಜಾಧವ, ಆಕಾಶ ಬಾಳೇಕುಂದ್ರಿ ಸೇರಿದಂತೆ ವಿಘ್ನಾರ್ಹತಾ ಗಣೇಶ ಉತ್ಸವ ಮಂಡಳಿ ಸೇರಿದಂತೆ ಪಾರ್ವತಿ ನಗರದ ಜನರು ಉಪಸ್ಥಿತರಿದ್ದರು.

Read All News