ಗಣೇಶೋತ್ಸವ ಹಿನ್ನೆಲೆ: ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ ಹೆಚ್ಚಿಸಿ - ಮೃಣಾಲ ಹೆಬ್ಬಾಳಕರ್

  • 14 Jan 2024 , 10:28 PM
  • Belagavi
  • 112

ಬೆಳಗಾವಿ : ಗಣೇಶೋತ್ಸವನ್ನು ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುವ ಹಾಗೂ ಗಣೇಶ ದರ್ಶನಕ್ಕಾಗಿ ಬೆಳಗಾವಿಗೆ ಬರುವ ಗ್ರಾಮೀಣ ಭಾಗದ ಜನರಿಗೆ ಬಸ್ ಸೌಲಭ್ಯವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಮೃಣಾಲ ಹೆಬ್ಬಾಳಕರ್ ನೇತೃತ್ವದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಕಳೆದ ಎರಡು ವರ್ಷ ಕೊರೋನಾ ಸಂಕಷ್ಟದಿಂದಾಗಿ ಯಾವುದೇ ಹಬ್ಬ ಜಾತ್ರೆಗಳನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ದೊಡ್ಡ ಉತ್ಸಾಹದಿಂದ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ಗ್ರಾಮೀಣ ಭಾಗದಿಂದ ನಗರದತ್ತ ಹಾಗೂ ನಗರದಿಂದ ಗ್ರಾಮೀಣ ಭಾಗಕ್ಕೆ ಹೋಗಿ ಬರಲು ಬಸ್ ಸೌಲಭ್ಯ ಸರಿ ಇಲ್ಲ. ಆದ್ದರಿಂದ ಗಣೇಶ ಚತುರ್ಥಿಯ ಈ ಸಂದರ್ಭದಲ್ಲಿ ಬಸ್ ಗಳ ಸೇವೆಯನ್ನು ಹೆಚ್ಚಿಸಬೇಕು ಎಂದು ಕೆಎಸ್‌ಆರ್ ಟಿಸಿ ಡಿಸಿ ಬಿ.ವೈ ನಾಯಕ ಅವರಿಗೆ ಮನವಿ ಸಲ್ಲಿಸಿದರು. ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಡಿಸಿ ನೀಡಿದರು.

ಮೃಣಾಲ್ ಹೆಬ್ಬಾಳಕರ್ ಇವರ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ ಬೆಳಗಾವಿಯ ಪ್ರಮುಖರಾದ ಮಂಜುನಾಥ್ ತುಕ್ಕಾರ್, ಅಡ್ವೋಕೇಟ್ ಹರ್ಷವರ್ಧನ್ ಪಾಟೀಲ್, ಅಜಿತ್ ಕದಮ್, ಶರತ್ ಪಾಟೀಲ್, ಮಹಾಂತೇಶ್ ಪಾರಿಶ್ವಾಡ, ಸಚಿನ್ ಕಿಲ್ಲೇಕರ್, ಹೊಳಪ ಪೂಜಾರಿ, ಮುರುಸಿದ್ಧ ಬಾಳೆಕುಂದ್ರಿ, ಪ್ರೇಮ ಕೊಲಕಾರ್, ಸಂಗಪ್ಪ ಕುಡಚಿ, ಪವನ್ ರಾಮಣ್ಣವರ, ಪ್ರವೀಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read All News