ಗಾಂಜಾ‌ ಮಾರಾಟಗಾರರ ಬಂಧನ

  • 15 Jan 2024 , 2:01 AM
  • Belagavi
  • 138

ಬೆಳಗಾವಿ: ಖಚಿತ ಮಾಹಿತಿ ಆದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ್ ರವರ ನೇತೃತ್ವದ ತಂಡ ಬೆಳಗಾವಿ ನಗರದ ಎಪಿಎಂಸಿ ಮಾರ್ಕೆಟ್ ಯಾರ್ಡ್ ನಲ್ಲಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಘಟನೆ ನಡೆದಿದೆ. ಗಣೇಶ್ ರಾಜು ಟಿಟಂಬಿ, ವಯಸ್ಸು 21 ಖಾಸಬಾಗ್, ಈತನನ್ನು ವಿಚಾರಣೆ ಮಾಡಿದ್ದು ಇವನಿಂದ 1. 3 ಕೆಜಿ ಅಂದಾಜು ಬೆಲೆ ರೂ 26,000 ರೂ. ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಯಿತು.

ಈ ಕುರಿತು ಪಿಐ, ಸಿಸಿಬಿ ನೀಡಿದ ದೂರಿನ ಮೇರೆಗೆ ಸಿ ಇ ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಇನ್ಸ್ ಪೆಕ್ಟರ್ ನಿಂಗನಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಎಚ್ಎಸ್ ನಿಸನ್ನವರ್, ಎಸ್ ಬಿ ಪಾಟೀಲ್, ಎಂ ಎಂ ವಡೆಯರ್, ಎಸ್ ಎಂ ಭಜಂತ್ರಿ, ವೈ ಡಿ ನದಾಫ್ ರವರುಗಳ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿರುತ್ತಾರೆ.

Read All News