ಶಿವರಾಜ್ ತಂಗಡಗಿಗೆ ಸಚಿವ ಸ್ಥಾನ ಕೊಡಿ: ಓಂಕಾರಪ್ಪ.

  • Shivaraj Bandigi
  • 15 Jan 2024 , 4:13 AM
  • Koppal
  • 213

ಕನಕಗಿರಿ: ಕನಕಗಿರಿ ವಿಧಾನ ಸಭಾ ಕ್ಷೇತ್ರ ಎಸ್,ಸಿ ಮೀಸಲು ಕ್ಷೇತ್ರ. ಕರ್ನಾಟಕ ರಾಜ್ಯದಲ್ಲಿ ತುಂಬಾ ಹಿಂದುಳಿದ ಪ್ರದೇಶ ಕನಕಗಿರಿ ಕ್ಷೇತ್ರ.

ಅಭಿವೃದ್ಧಿಯಾಗಬೇಕಾದರೆ ಶಿವರಾಜ್ ತಂಗಡಗಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಹೋಸ್ಕೇರ ಡಗ್ಗಿ  ಒತ್ತಾಯಿಸಿದರು.ಎರಡು ಬಾರಿ ಸಚಿವರಾಗಿ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅದರಿಂದ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲೇ ಬೇಕು ಎಂದು ಹೇಳಿದರು.

ಶಿವರಾಜ್ ತಂಗಡಗಿ ಅವರು ಎಲ್ಲಾ ಸಮುದಾಯದಲ್ಲಿ ಉತ್ತಮ ಒಡನಾಟ ಹೊಂದಿದ್ದರೆ ಎಲ್ಲಾ ಸಮುದಾಯದ ಮುಖಂಡರು ಒತ್ತಾಯ ಮೇರೆಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ನೀಡಬೇಕು ಎಂದು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮನವಿ ಮಾಡಿದರು.

ಈಗಾಗಲೇ ಹೈದರಾಬಾದ್‌ ಕರ್ನಾಟಕ ಭಾಗವು ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಔದ್ಯೋಗಿಕ ದೃಷ್ಟಿಯಿಂದ ಹಿಂದುಳಿದಿದೆ. ಹೀಗಾಗಿ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮತ್ತು  ಸಂವಿಧಾನದ ವಿಧಿ 371 (ಜೆ) ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದಕ್ಕಾಗಿ ಹಾಗೂ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ, ಈ ಭಾಗದ ರೈತರು ನೀರಿನ ಕೊರತೆ ಅನುಭವಿತ್ತಿರುವುದನ್ನು ತಪ್ಪಿಸಲು, ತುಂಗಭದ್ರಾ ಜಲಾಶಯಕ್ಕೆ ಸಮನಾಂತರ ಜಲಾಶಯಗಳನ್ನು ನಿರ್ಮಿಸಲು ಶಿವರಾಜ್ ತಂಗಡಗಿ ಅವರನ್ನು ಸಚಿವರನಾಗಿ ಮಾಡಬೇಕು ಎಂದು ಹೇಳಿದರು.

ಕೊಪ್ಪಳ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ  ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು  ಆಗಬೇಕಿವೆ. ಹೀಗಾಗಿ ಮೂರು ಬಾರಿ ಶಾಸಕರಾಗಿ, ವಿವಿಧ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿರುವ, ಅನುಭವಿ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ತಂಗಡಗಿ ಅವರಿಗೆ ಈ ಬಾರಿ ಬೃಹತ್ ನೀರಾವರಿ ಅಥವಾ ಲೋಕೋಪಯೋಗಿ ಇಲಾಖೆಯ ಸಚಿವ ಸ್ಥಾನದ ಜೊತೆಗೆ ಸಚಿವ ಸ್ಥಾನ ನೀಡಬೇಕು.

ಆಮೂಲಕ ಶಿವರಾಜ್ ತಂಗಡಗಿ ಅವರ ಅನುಭವ ಸರ್ಕಾರದ ಮಟ್ಟದಲ್ಲಿ ಮತ್ತು ವಿಶೇಷವಾಗಿ ಹಿಂದುಳಿದ ಪ್ರದೇಶ ಎಂಬ ಹಣೆ ಪಟ್ಟಿ ಹೊಂದಿರುವ
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಉಪಯೋಗವಾಗುತ್ತದೆ. ಹೀಗಾಗಿ ಶಿವರಾಜ್ ತಂಗಡಗಿ ಅವರಿಗೆ ಸಚಿವ ಸ್ಥಾನ ನೀಡಲೇ ಬೇಕು ಎಂದು ಅವರು ಒತ್ತಾಯಿಸಿದ್ದಾರೆ

Read All News