ದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ದಿನಾಂಕ 20 ಸೆಪ್ಟೆಂಬರ್ 2022 ರ GSR 714(E) ಪ್ರಕಾರ G.S.R ಮೂಲಕ ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರಗಳಿಗೆ (ADTC) ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿಯನ್ನು ಸೂಚಿಸಿದೆ.
ಹೊಸ ನಿಯಮಗಳು ಈ ಕೆಳಗಿನ ಪ್ರಮುಖ ವೈಶಿಷ್ಟ್ಯಗಳೊಂದಿಗೆ ADTC ಗಳ ಕಾರ್ಯನಿರ್ವಹಣೆಯನ್ನು ಮತ್ತಷ್ಟು ಸುಗಮಗೊಳಿಸುತ್ತದೆ ಎಂದು ತಿಳಿದು ಬಂದಿದೆ .
1. ADTC ಯ ಮಾನ್ಯತೆಯ ನವೀಕರಣವು ಐದು (5) ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ.
2. ಪ್ರಾಯೋಗಿಕ ಹಾಗೂ ಸೈದ್ಧಾಂತಿಕ ಜ್ಞಾನವನ್ನು ಸಮಗ್ರವಾಗಿ ಒಳಗೊಳ್ಳಲು ದ್ವಿಚಕ್ರ ವಾಹನಗಳಿಗೆ ತರಬೇತಿ ನೀಡಲು ಪಠ್ಯಕ್ರಮವನ್ನು ನಿರ್ದಿಷ್ಟವಾಗಿ ವಿವರಿಸಲಾಗಿದೆ.
3. ಡ್ರೈವಿಂಗ್ ಲೈಸೆನ್ಸ್ ನೀಡಿಕೆಗಾಗಿ ಪ್ರಾವೀಣ್ಯತೆಯ ಪರೀಕ್ಷೆಯ ಪ್ರಮಾಣಪತ್ರವನ್ನು ಸ್ವೀಕರಿಸಲು "ಚಾಲನೆ ಮಾಡಲು ಸಾಮರ್ಥ್ಯದ ಪರೀಕ್ಷೆ" ಯಲ್ಲಿ ತರಬೇತಿ ಪಡೆಯುವವರು ಉತ್ತೀರ್ಣರಾಗಬೇಕಾಗುತ್ತದೆ.
4. ADTC ಗೆ ಲಿಂಕ್ ಮಾಡಲಾದ ಇತರ ನಿಬಂಧನೆಗಳು ಅಂದರೆ. ಶುಲ್ಕ, ಚಾಲನಾ ಪರವಾನಿಗೆ ನೀಡಿಕೆ ಇತ್ಯಾದಿಗಳನ್ನು ಸ್ಪಷ್ಟಪಡಿಸಲಾಗಿದೆ.
ಗೆಜೆಟ್ ಅಧಿಸೂಚನೆ ಈ ಕೆಳಗಿನಂತಿದೆ