ಜಿಲ್ಲೆಗೆ ಅನುದಾನ, ರಾಜಕೀಯ ಪ್ರಾತಿನಿಧ್ಯ ಅಸ್ಪಷ್ಟವಾಗಿದೆ ರಾಷ್ಟ್ರೀಯ ರೈತರ ಸಂಘ

  • shivaraj bandigi
  • 27 Jun 2024 , 1:00 PM
  • Belagavi
  • 5784

ಬೆಳಗಾವಿ : ಸುಮಾರು 300 ಕೋಟಿ ಅನುದಾನದಲ್ಲಿ ಜಿಲ್ಲೆಗೆ ಉತ್ತಮ ಕಟ್ಟಡವನ್ನು ಒದಗಿಸುವ ಬದಲು, ರೈತರ ಸಾಲ ಮನ್ನಾ ಮಾಡಬೇಕು. ಈ ಬಗ್ಗೆ ಅನುಷ್ಠಾನ ಕೈಗೊಳ್ಳುವಲ್ಲಿ ಶಾಸಕರು ಮತ್ತು ಕಾರ್ಯನಿರ್ವಾಹಕರು ನಿರಾಸೆ ವಿಫಲರಾಗಿರುವದರಿಂದ ಹಿನ್ನಡೆಯಾಗಿದೆ ಎಂದು ರಾಷ್ಟ್ರೀಯ ರೈತರ ಸಂಘದ ಹೋರಾಟಗಾರರು ಹೇಳಿದರು. 

ನಿರಂತರ ಮಹಾಪೂರ, ಬರಗಾಲ, COVID-19 ಪಾಂಡಮಿಕ್, ತತ್ತರಿಸಿದ ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ನೀಡದಿರುವುದರಿಂದ, ಬೆಳಗಾವಿಯ ರೈತರು ಸಂಕಷ್ಟದಲ್ಲಿದ್ದಾರೆ ಎಂದರು. 

ಡಾ. ಸ್ವಾಮಿನಾಥನ್ ವರದಿ ಜಾರಿಗೆ ತರದೇ ಇರುವದರಿಂದ ಬೆಳೆಗಳಿಗೆ ಸಮರ್ಪಕ ಬೆಲೆ ಪಡೆಯಲು ಸಾಧ್ಯವಾಗುವದಿಲ್ಲ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತರ ಸಾಲ ಭಾಧೆ ನಿವಾರಣೆಯಾಗುವದು ಯಾವಾಗ? ಕೂಡಲೇ ಯೋಜನೆಯ ಅನುಷ್ಠಾನಕ್ಕೆ ಕಾರ್ಯಬದ್ದರಾಗಿ ಕೆಲಸ ನಿರ್ವಹಿಸಿ ಎಂದು ಒತ್ತಾಯಿಸಿದರು. 

ಸರ್ಕಾರಗಳು ಬೆಳಗಾವಿ ಜಿಲ್ಲೆಯನ್ನು ಕರ್ನಾಟಕದ ಎರಡನೇ ರಾಜ್ಯಧಾನಿ ಎಂದು ಪರಿಗಣಿಸಲ್ಪಟ್ಟರೂ ಸಹ ಸ್ವಾತಂತ್ರ್ಯ ನಂತರವೂ ಕೂಡಾ ಜಿಲ್ಲೆಯ ರಾಜಕೀಯ ಪ್ರತಿನಿಧಿಗಳಿಗೆ ಪೂರ್ಣ ಪ್ರಮಾಣದ ಪ್ರಾತಿನಿಧ್ಯ ನೀಡಲಿಲ್ಲ. ಕೇಂದ್ರ ಸರ್ಕಾರದಲ್ಲಿ ಜಗದೀಶ ಶೆಟ್ಟರ್ ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ ಎಂದರು. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕೋರಿಕೆಗಳಿಗೆ ಸ್ಪಂದಿಸದಿದ್ದಲ್ಲಿ, ಜಿಲ್ಲೆಯ ರೈತರು ಪಟ್ಟಿ ಮಾಡಿ, ಪ್ರಾದಾನ್ಯತೆ ಬಗ್ಗೆ ಅಭಿಮತ ಕ್ರೂಢಿಕರಿಸುವುದಾಗಿ, ಹಾಗೂ ಉಗ್ರ ಹೋರಾಟ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಹೋರಾಟಗಾರರು ಮತ್ತು ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.  

ಹಿರಿಯ ಹೋರಾಟಗಾರರಾದ ಪ್ರಕಾಶ ನಾಯಕ, ಕಿಶನ ನಂದಿ, ಸುರೇಶ ಪರಗಣ್ಣವರ, ರವೀಂದ್ರ ಸುಪ್ಪನ್ನವರ, ಪಾಂಡು ಬೀರನಗಡ್ಡಿ ಈ ಕುರಿತಾದ ಸ್ಪಷ್ಟನೆ ನೀಡಿ, ಬೆಳಗಾವಿ ಜಿಲ್ಲೆಗೆ ಸಕಾರಾತ್ಮಕ ಸ್ಪಂದನೆಯನ್ನು ನಿರೀಕ್ಷಿಸಲಾಗಿದೆ ಎಂದರು.

Read All News