ಚಿಕ್ಕೋಡಿ : ಮೂಲಭೂತ ಸೌಕರ್ಯ ಕೇಳಿದ್ದಕ್ಕೆ ಗ್ರಾಮ ಪಂಚಾಯತಿ ಸದಸ್ಯನೊಬ್ಬ ಗೂಂಡಾ ವರ್ತನೆ ತೋರಿದ ಘಟನೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸೂರಣ್ಣವರ ತೋಟದ ವಾರ್ಡ್ ನಂ 5ರ ಸದಸ್ಯ ಯಲ್ಲಪ್ಪ ಮಾರುತಿ ಸಣ್ಣಕ್ಕಿನವರ ಗೂಂಡಾ ವರ್ತನೆ ತೋರಿದ್ದು, ನಮಗೆ ಕುಡಿಯೋದಕ್ಕೆ ನೀರು ಬರ್ತಿಲ್ಲ, ನೀರು ಕೊಡಿ ಎಂದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಕುಡಿಯಲು ನೀರು ಇತರೆ ಸೌಲಭ್ಯ ಕೇಳಲು ಗ್ರಾಮ ಪಂಚಾಯತಿಗೆ ತೆರಳಿದ್ದ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದೇ ಗ್ರಾಮಸ್ಥರ ಮೇಲೆ ಗೂಂಡಾವರ್ತನೆ ಮೆರೆದಿದ್ದಾನೆ. ಯಲ್ಲಪ್ಪ ಸಣ್ಣಕ್ಕಿನವರ
ಈತನ ಸದಸ್ಯತ್ವ ರದ್ದು ಪಡಿಸುವಂತೆ ಗ್ರಾಮಸ್ಥರ ಆಗ್ರಹಿಸುತ್ತಿದ್ದಾರೆ.