ಬೈಲಹೊಂಗಲ : ಗುರು ಪೂರ್ಣಿಮೆಯ ಅಂಗವಾಗಿ ಪಟ್ಟಣದ ಮುರಗೋಡ ರಸ್ತೆಯ ಬಸವನಗರದಲ್ಲಿರುವ ಶ್ರೀಮಾತಾ ಗುರುಕುಲ ನರ್ಸರಿ ಶಾಲೆಯಲ್ಲಿ ಗದಗ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರಿಗೆ ಗುರುಪಾದ ಪೂಜೆ ನಡೆಯಲಿದೆ.
ಅದೇ ದಿನ ಪಾಲಕರ ಸಭೆ ಹಾಗೂ ಗುರುಕುಲದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮಾತಾ ಗುರುಕುಲದ ಅಧ್ಯಕ್ಷ ವೇ.ಮೂ.ಡಾ. ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ತಿಳಿಸಿದ್ದಾರೆ.
ವರದಿ : ರವಿಕಿರಣ್ ಯಾತಗೇರಿ