ನಾಳೆ ಗುರುವಂದನಾ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮ

  • shivaraj bandigi
  • 14 Jan 2024 , 6:29 PM
  • Belagavi
  • 732

ಬೈಲಹೊಂಗಲ : ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯ ಇದರ ಸನ್ 2004-05 ನೇ ಸಾಲಿನ ಬಿಕಾಂ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ‌ನಾಳೆ ಮಹಾವಿದ್ಯಾಲಯದ ಆವರಣದಲ್ಲಿ ‌ಬೆಳಿಗ್ಗೆ10 ಕ್ಕೆ ಜರುಗಲಿದೆ.

ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಗುರು ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮಿಜಿ ವಹಿಸುವರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಬಿ.ಬಿ.ಬೂದಿಹಾಳ ವಹಿಸುವರು. ಉದ್ಘಾಟಕರಾಗಿ ಸಂಸ್ಥೆಯ ಚೇರಮನ್ ಡಾ. ವಿಶ್ವನಾಥ ಪಾಟೀಲ ಆಗಮಿಸುವರು. ಸ್ನೇಹ ನುಡಿಯನ್ನು ಬೆಳಗಾವಿಯ ಲೆಕ್ಕ ಪರಿಶೋಧಕ ವೀರಣ್ಣ ಮುರಗೋಡ ನಡೆಸಿಕೊಡುವರು.

ಸನ್ 2004-05 ನೇ ಸಾಲಿನ ಅಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು ನಂತರ ಹಳೆಯ ವಿದ್ಯಾರ್ಥಿಗಳಿಂದ ವಿವಿದ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ.

Read All News