ಹಲಾಲ ಮುಕ್ತ ಯುಗಾದಿಗೆ ಕರೆ ನೀಡಿದ ಹಿಂದೂ ಜನ ಜಾಗೃತಿ ಸಮಿತಿ
Krishna Shinde
15 Jan 2024 , 2:29 AM
Belagavi
214
ಬೆಳಗಾವಿ :ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಸಮಾನತೆ, ಬಂದುತ್ವ ಮತ್ತು ನ್ಯಾಯ ಸಿಗುವುದು ಎಂದು ಹೇಳಲಾಗುತ್ತದೆ, ಪ್ರತ್ಯಕ್ಷದಲ್ಲಿ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತ ಆಯೋಗ ಸಚ್ಚರ ಆಯೋಗ, ಹಿಂದುಳಿದವರ ಅಭಿವೃದ್ಧಿ ಸಚಿವಾಲಯಗಳಿವೆ ,ಆದರೆ ಬಹುಸಂಖ್ಯಾತ ಹಿಂದೂಗಳಿಗೆ ಸಂರಕ್ಷಣೆ ನೀಡುವ ಯಾವುದೇ ಸಚಿವಾಲಯ, ಅಯೋಗ ಇಲ್ಲ,ದೇಶಾದ್ಯಂತ ಕೇವಲ ಹಿಂದೂಗಳ ಮಂದಿರಗಳ ಸರಕಾರೀಕರಣ ನಡೆದಿದೆ ,ಆದರೆ ಮಸೀದಿಗಳ - ಚರ್ಚಗಳ ಸರಕಾರೀಕರಣ ಏಕಿಲ್ಲ ಅಲ್ಪಸಂಖ್ಯಾತರಿಗೆ ಧರ್ಮದ ಆಧಾರದಲ್ಲಿ ಶೈಕ್ಷಣಿಕ ಅನುದಾನ, ಆದರೆ ಬಹುಸಂಖ್ಯಾತ ಹಿಂದೂಗಳು ಏನು ಅಪರಾಧ ಮಾಡಿದ್ದಾರೆ ?ಇದೆಲ್ಲವನ್ನು ನೋಡಿದರೆ, ಭಾರತದಲ್ಲಿ ನಿಜವಾಗಿಯೂ ಸೆಕ್ಯುಲರ್ ( ಜಾತಿ ವ್ಯವಸ್ಥೆ) ಅಸ್ತಿತ್ವದಲ್ಲಿದೆಯೆ ? ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದೂಗಳ ಸಾವಿರಾರು ಯುವತಿಯರನ್ನು ನಾಶಗೊಳಿಸುವ 'ಲವ್ -ಜಿಹಾದ್ , ಭಾರತೀಯ ಅರ್ಥವ್ಯವಸ್ತೆಯ ಮೇಲೆ ಸಂಕಟವಾಗಿರುವ ಹಲಾಲ ಜಿಹಾದಗಳಂತಹ ಹಿಂದೂಗಳ ಮೇಲೆ ಆಗುವ ಅನೇಕ ಅನ್ಯಾಯಗಳ ವಿರುದ್ಧ ಸೆಟೆದು ನಿಲ್ಲಲು ಹಾಗೆಯೇ ಹಿಂದೂ ರಾಷ್ಟ್ರದ ಧ್ವನಿಯನ್ನು ಗಟ್ಟಿಗೊಳಿಸಲು ಮಾರ್ಚ್ 19, 20 ರಂದು ಸಾಯಂಕಾಲ 5:30 ಗಂಟೆಗೆ ಮಾಲಿನಿ ಪರಿಸರ, ವಡಗಾವ ಮುಖ್ಯ ರಸ್ತೆ, ಶಹಾಪೂರ ಪೊಲೀಸ್ ಠಾಣೆಯ ಹತ್ತಿರ ಭಾರತ ನಗರ, ಶಹಾಪೂರ, ಬೆಳಗಾವಿ ಇಲ್ಲಿ ಹಿಂದೂ ರಾಜ್ಯ ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆಯೆಂದು ಹಿಂದೂ ಜನಜಾಗೃತಿ ಸಮಿತಿಯ ಪಶ್ಚಿಮ ಮಹಾರಾಷ್ಟ್ರ , ಕೊಂಕಣ, ಗೋವಾ ಮತ್ತು ಗುಜರಾತ ರಾಜ್ಯ ಸಮನ್ವಯಕರಾದ ಮನೋಜ ಖಾಡಯೆ ಇವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಬೆಳಗಾವಿ ಜಿಲ್ಲಾ ಸಮನ್ವಯಕರಾದ ಋಷಿಕೇಶ್ ಗುರ್ಜರ, ಕರ್ನಾಟಕ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಮುಂತಾದವರು ಸೇರಿದ್ದರು.