ಅಥಣಿ :
ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆ ಪರಪ್ರಚಾರದ ವೇಳೆ ಜನರ ಒಲವು ಬಿಜೆಪಿಯ ಅಬ್ಯರ್ಥಿ ಮೇಲಿದೆ ಕಾಂಗ್ರೆಸ್ ನಾಯಕರೂ ಕೂಡ ಬಿಜೆಪಿಯ ಅಣ್ಣಾಸಾಬ ಜೊಲ್ಲೆ ಅವರನ್ನು ಬೆಂಬಲಿಸುತ್ತಾರೆ ಅವರ ಗೆಲುವು ಖಚಿತ ಎಂದ ಯತ್ನಾಳ.
ಪ್ರತಿ ಚುನಾವಣೆಯಲ್ಲಿ ಜಾತಿಯ ವಿಷ ಬೀಜ ಬಿತ್ತುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಿದೆ ಅವರ ಪ್ರಣಾಳಿಕೆ ಮುಸ್ಲಿಂ ಲೀಗ್ ಪ್ರಣಾಳಿಕೆಯಾಗಿದೆ ಎಂದು ಮೋದಿಯವರೇ ಹೇಳಿದ್ದಾರೆ.
ಅಗ್ನಿಪಥ ಯೋಜನೆ ಕೈಬಿಡುವ ಉಲ್ಲೇಖವಿದೆ ಸ್ವಾತಂತ್ರ್ಯ ನಂತರ ನೆಹರು ಮಾಡಿದ ಪ್ರಮಾದಗಳಿಂದಲೇ ದೇಶದಲ್ಲಿ ಅರಾಜಕತೆ ಉಂಟಾಯಿತು.
ಜಮ್ಮು ಕಾಶ್ಮೀರಕ್ಕೆ 370 ವಿಧಿ ಜಾರಿಗೆ ತಂದಿದ್ದರು ಆದರೆ ಪ್ರಧಾನಿ ಮೋದಿ ಅದನ್ನು ರದ್ದುಗೊಳಿಸಿದರು ಭಾರತ ಮತ್ತು ಸನಾತನ ಧರ್ಮದ ಉಳಿವಿಗಾಗಿ ಮೂರನೆ ಬಾರಿ ಮೋದಿ ಪ್ರಧಾನಿಯಾಗಬೇಕು
ಮೋದಿ ಪ್ರಧಾನಿ ಆದರೆ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಮೋದಿ ಅವರೊಂದಿಗೆ ಚರ್ಚಿಸುತ್ತೇನೆ.
ನಂತರ ಮಾತನಾಡಿದ ಅಣ್ಣಾಸಾಬ್ ಜೊಲ್ಲೆ ಸಂಸದನಾಗಿ ಐದು ವರ್ಷಗಳ ಅವಧಿಯಲ್ಲಿ ಅರ್ಧಕ್ಕಿಂತ ಹೆಚ್ಚು ಅವಧಿ ಕರೋನಾ ಮತ್ತು ಪ್ರವಾಹದಂತಹ ಸಮಸ್ಯೆಗೆ ಮೀಸಲಿಡಬೇಕಾಯಿತು ಇನ್ನುಳಿದ ಅವಧಿಯಲ್ಲಿ ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ವಿನಿಯೋಗಿಸಿರುವೆ.
ಅಥಣಿ ಕ್ಷೇತ್ರದಲ್ಲಿ ಪಿ.ಎಮ್.ಜಿ.ಎಸ್.ವೈ ಯೋಜನೆಯಡಿ 25 ಕೋಟಿ ಅನುದಾನದಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಲೋಕೋಪಯೋಗಿ ಇಲಾಖೆ ಮೂಲಕ ರಸ್ತೆ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಸಂಸದ ನಿಧಿಯಲ್ಲಿ 2 ಕೋಟಿ 97 ಲಕ್ಷ ರೂ.ಅನುದಾನದಲ್ಲಿ ಅಂಬ್ಯುಲೆನ್ಸ, ಸಿಸಿ ಕ್ಯಾಮರಾ ಅಳವಡಿಕೆ, ಬಸ್ ಶೆಲ್ಟರ್, ಸಮುದಾಯ ಭವನಗಳನ್ನು ನಿರ್ಮಾಸಲಾಗಿದೆ ಎಂದರು.
ಅಥಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ 4480 ಕೋಟಿ ಅನುದಾನ ಮಂಜೂರು ಮಾಡಿಸಿದ್ದು ಅಲ್ಲದೆ ಕೆ.ಎನ್.ಎನ್ ಮೂಲಕ ಝುಂಜರವಾಡದಲ್ಲಿ 1 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ಕೈ ಗೊಂಡಿದ್ದೇವೆ .
ವರದಿ : ರಾಹುಲ್ ಮಾದರ