ನೋಡಿದಿರಾ ಕೊಕಟನೂರ ಯಲ್ಲಮ್ಮದೇವಿ ಜಾತ್ರೆ !

  • 15 Jan 2024 , 5:23 AM
  • Belagavi
  • 421

ಅಥಣಿ : ತಾಲೂಕಿನ ಕೊಕಟನೂರ ಗ್ರಾಮದ ರೇಣುಕಾ ಯಲ್ಲಮ್ಮದೇವಿ ಜಾತ್ರೆಯ ಎಳ್ಳ ಅಮವಾಸ್ಯೆ ದಿನದಂದು ಶುಕ್ರವಾರ ಸಾವಿರಾರು ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.

ಆಚಾರ್ಯ ಪ್ರದೀಪ ಜೋಶಿ ನೇತೃತ್ವದಲ್ಲಿ ಅಗ್ನಿ ಕುಂಡಕ್ಕೆ ವಿಶೇಷ ಪೂಜೆ, ಅಭಿಷೇಕ, ಹೋಮ-ಹವನ ವಿಧಿ ವಿಧಾನ ಪೂರ್ವಕವಾಗಿ ನೆರವೇರಿಸಿದರು. ದೇವಿ ದರ್ಶನ ಪಡೆದ ಭಕ್ತರು ಪಂಚ ಪದಾರ್ಥಗಳಾದ ಉಡಿ ತುಂಬಿ, ಗಜ್ಜರಿ, ತಪ್ಪಲ ಈರುಳ್ಳಿ, ಬದನೆಕಾಯಿ, ಮೆಂತೆ, ಬಾಳಿಕಾಯಿ ಸೇರಿದಂತೆ ಕಡಬು, ಹೋಳಿಗೆಯನ್ನು ಹಡಲಗಿ ಬುಟ್ಟಿಯಲ್ಲಿಟ್ಟು ಕುಂಕುಮ ಅರಿಶಿಣ ಹಚ್ಚಿ ಭಕ್ತಿ-ಭಾವದಿಂದ ನೈವೇದ್ಯ ಅರ್ಪಿಸಿದರು.

ಮುತ್ತೈದೆತನ ಗಟ್ಟಿಯಾಗಲೆಂದು ದೇವಸ್ಥಾನದಲ್ಲಿ ಬಳೆ ಉಡಿಸಲಾಯಿತು. ಮದುವೆ ಮಾಡಿ ಕೊಟ್ಟ ಹೆಣ್ಣು ಮಕ್ಕಳನ್ನು ತವರು ಮನೆಗೆ ಕರೆಯಿಸಿ ಅವರಿಗೆ ಉಡಿ ತುಂಬಿ ಕಳುಹಿಸಲಾಯಿತು. ಜಾತ್ರಾ ಕಮಿಟಿ ಅಧ್ಯಕ್ಷ ಬಾಬುಗೌಡ ಬುಲಗೌಡ ಮಾತನಾಡಿ, 2 ವರ್ಷದಿಂದ ಕರೋನಾ ಹಿನ್ನೆಲೆಯಲ್ಲಿ ಜಾತ್ರೆ ಸಂಭ್ರಮದಿಂದ ಮಾಡಲು ಸಾಧ್ಯವಾಗಿರಲಿಲ್ಲ. ಕಾರಣ, ಈ ಬಾರಿ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದರು. ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಜಾತ್ರೆಗೆ ಆಗಮಿಸಿದ ಭಕ್ತರಿಗೆ ಎಲ್ಲ ರೀತಿ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ರೈತರು ಚರಗಾ ಚಲ್ಲುವ ಮೂಲಕ ಸಕಾಲಕ್ಕೆ ಮಳೆ ಬಂದು ಹುಲುಸಾದ ಬೆಳೆ ಬರಲಿ ಎಂದು ಪ್ರಾರ್ಥಿಸಿದರು. ಭೀಮಶಿ ಪೂಜಾರಿ, ಪ್ರಭಾಕರ ಚೌವ್ಹಾಣ್‌, ಶಾಮರಾವ ಪೂಜಾರಿ, ಪಾಂಡುರಂಗ ಚೌವ್ಹಾಣ್‌, ಜಾಯಪ್ಪ ದೇಸಾಯಿ, ಸುಭಾಷ ಪಾಟಣಕರ, ಸುರೇಶ ಘಾಟಗೆ, ಭೀಮು ನಾಯಕ, ಅರ್ಜುನ, ತುಂಗಳಿ, ಮಹಾದೇವ ಗಂಜಿ, ರಾಘವೇಂದ್ರ ಚೌವ್ಹಾಣ್‌, ಜಟಿಂಗ್ ಧಡಕೆ ಇತರರಿದ್ದರು.

ವಿಡಿಯೋ ಕೃಪೆ : ಕೊಕಟನೂರ ಯಲ್ಲಮ್ಮ

Read All News