ಹಾವೇರಿಯ ಲೋಕಾಯುಕ್ತ ಇನ್ಸ್ಪೆಕ್ಟರ್ ಕಾರು ಅಪಘಾತದಲ್ಲಿ ದುರ್ಮರಣ

  • Shivaraj
  • 6 Dec 2025 , 12:43 AM
  • Haveri
  • 14

ಬೈಲಹೊಂಗಲ : ಸಮೀಪದ ಮುರಗೋಡ ಗ್ರಾಮದ ಪಂಚಾಕ್ಷರಿ ಸಾಲಿಮಠ ಇಂದು ಧಾರವಾಡ ತಾಲೂಕಿನ ಅಣ್ಣಿಗೇರಿಯ ಸಮೀಪದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

ಹಾವೇರಿಯ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಗದಗದಲ್ಲಿ ಇರುವ ಕುಟುಂಬವನ್ನು ಸೇರಲು ಹೊರಟಿರುವ ಸಂದರ್ಭದಲ್ಲಿ ಅವರೇ ಚಲಾಯಿಸುತ್ತಿದ್ದ ಕಾರು ರಸ್ತೆಯ ಡಿವೈಡರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕಿಡಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿ ಬೆಂಕಿ ಆವರಿಸಿ ಅಧಿಕಾರಿ ಬೆಂಕಿಗಾಹುತಿಯಾಗಿ ದಾರಿ ಮದ್ಯದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದವರಾದ ಇವರು ಪೋಲಿಸ್ ಅಧಿಕಾರಿಯಾಗಿ ಬೈಲಹೊಂಗಲ, ಹುಬ್ಬಳ್ಳಿ ಹಾಗೂ ಗದಗದಲ್ಲಿ ದಕ್ಷ, ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕಲ್ಬುರ್ಗಿ ಜಿಲ್ಲೆಯ ಸೇಡಂ ಮತ್ತು ಅಫಜಲಪುರದಲ್ಲಿಯೂ ತಮ್ಮ ನಿಷ್ಠೆ, ಕರ್ತವ್ಯ ನಿರ್ವಹಿಸಿದ್ದರು, ಅತ್ಯಂತ ಶಿಸ್ತು, ಶಾಂತ ಸ್ವಭಾವದ ಇವರ ನಿಧನ ಆತ್ಮೀಯ ವಲಯದಲ್ಲಿ ಕಂಬನಿ ಮಿಡಿಯುವಂತೆ ಮಾಡಿದೆ.

Read All News