ವಿಷಕನ್ಯೆ ಎಂದ ಸಾಹುಕಾರಗೆ ಹೆಬ್ಬಾಳಕರ ಕೌಂಟರ ಟಾಂಗ

  • shivaraj bandigi
  • 28 Jun 2024 , 2:25 PM
  • Belagavi
  • 11122

ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ..!


ಬೆಳಗಾವಿ : ಎಂಎಲ್‌ಸಿ ಚುನಾವಣೆಯಲ್ಲಿ ಯಾರ ಸೊಕ್ಕನಿಂದ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಲೋಕಸಭೆ ಚುನಾವಣೆಯಲ್ಲಿ ಸಚಿವೆ ಹೆಬ್ಬಾಳ್ಕರ್ ಹಣ ತೂರಾಡಿದ್ರು ಎಂಬ ರಮೇಶ ಜಾರಕಿಹೊಳಿ ಆರೋಪಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು. ಇಡೀ ಕರ್ನಾಟಕದಲ್ಲೇ ಅಂದು ನನ್ನ ತಮ್ಮ ಚನ್ನರಾಜ್ ಹಟ್ಟಿಹೊಳಿ ಅತಿ ಹೆಚ್ಚು ಮತಗಳಿಂದ ಗೆದ್ದಿದ್ದಾನೆ ಎಂದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ನನ್ನ ಸೋಲಿಸಲು ಬಂದಿದ್ದರು. ಅವರ ಪ್ರಯತ್ನಕ್ಕೆ ಅಂದು ನನ್ನ ಕ್ಷೇತ್ರದ ಮತದಾರರೇ ಉತ್ತರ ಕೊಟ್ರಿದ್ದಾರೆ. ಲಕ್ಷ್ಮಿ ಗೆದ್ದರೆ ದೊಡ್ಡ ಹಾರ ತಂದು ಹಾಕುತ್ತೇನೆ ಎಂದಿದ್ದರು, ಆ ಹಾರ ಇನ್ನೂ ಎಲ್ಲಿದೆ ಅಂತ ನಾನು ಕಾಯುತ್ತಿದ್ದೇನೆ. ನಾನು ಗೆದ್ದ ಮೇಲೆ ಅವರಿಗೆ ಉತ್ತರ ಕೊಡಲಿಲ್ಲ. ಈ ಮಾತಿಗೂ ಉತ್ತರ ಕೊಡಲ್ಲ, ಕಾಲಾಯ ತಸ್ಮೈ ನಮಃ ಎಂಬಂತೆ ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದರು.

ಸಚಿವೆ ಆದ ಬಳಿಕ ವಿಷಕನ್ಯೆ ಸೊಕ್ಕಿನ ದರ್ಪ ತೋರುತ್ತಿದ್ದಾರೆಂಬ ರಮೇಶ ಹೇಳಿಕೆ ವಿಚಾರಕ್ಕೆ ಉತ್ತರಿಸಿದ ಅವರು, ಭಾರತ ದೇಶದ ಸಂಸ್ಕೃತಿಯಲ್ಲಿ ವಿಶ್ವಾಸವಿಟ್ಟವಳು ನಾನು. ಅವರು ಯಾವುದರ ಬಗ್ಗೆ ಮಾತನಾಡಿದ್ದಾರೆ ಎನ್ನುವುದಕ್ಕಿಂತ ನಾನು ಅವರಿಗೆ ಉತ್ತರ ಕೊಡದಿರುವುದೇ ಉತ್ತಮ .ರಮೇಶ ಜಾರಕಿಹೊಳಿಗೆ ಜನರೆ ಉತ್ತರ ಕೊಡ್ತಾರೆ. ಅವರು ನನಗೆ ವಿಷ ಕನ್ಯೆ ಅಂತಾರೋ‌ ಇನ್ನೊಂದು ಕನ್ಯೆ ಅಂತಾರೋ ಅನ್ನಲಿ. ಅವರು ಏನು, ಅವರ ಸಂಸ್ಕೃತಿ ಎಂಥದ್ದು ಅಂತ ಇಡೀ ಕರ್ನಾಟಕ ಜನತೆಗೆ ಗೊತ್ತು. .ಅವರ ಬಗ್ಗೆ ನಾನೇಕೆ ಮಾತನಾಡಲಿ ಎಂದರು.

ದುಡ್ಡಿನಿಂದ ಚುನಾವಣೆ ಗೆಲ್ಲಲು ಹೋಗಿದ್ದೆ ಎಂಬ ರಮೇಶ ಆರೋಪ ಮಾಡಿದ್ದರು ನನ್ನ ಹತ್ರ ದುಡ್ಡು ಎಲ್ಲಿದೆ, ನೀವೆ ಎಲ್ಲರೂ ಅವರಿಗೆ ಸಾಹುಕಾರ ಅಂತಿರಿ ಹೆಸರಿಗಷ್ಟೇ ನಾನು ಲಕ್ಷ್ಮಿ, ಸಾಹುಕಾರ್‌ಗಳು ಅವರೇ ಎಂದರು.  

ಸತೀಶ್ ಜಾರಕಿಹೊಳಿಗೆ ಡಿಸಿಎಂ ಕೊಡಬೇಕೆಂಬ ಕೂಗು ವಿಚಾರಕ್ಕೆ ಡಿಸಿಎಂ ಹುದ್ದೆ ಕೊಡುವುದು ಹೈಕಮಾಂಡ್‌‌ನ ನಿರ್ಧಾರ ಎಂದರು. ಅಂಗನವಾಡಿ ಕಾರ್ಯಕರ್ತೆಯರ ಶಾಪದಿಂದ ಹೆಬ್ಬಾಳ್ಕರ್ ಪುತ್ರ ಸೋತಿದ್ದಾನೆಂಬ ರಮೇಶ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ಅಂಗನವಾಡಿ ಕಾರ್ಯಕರ್ತರ ಬಳಿಯಿಂದ ನಾನು 1 ಲಕ್ಷ ಪಡೆದ ಬಗ್ಗೆ ಸಾಕ್ಷಿ ಕೊಟ್ಟರೆ ನಾನು ಅದಕ್ಕೆ ಉತ್ತರಿಸುತ್ತೇನೆ ಎಂದರು.

 ಬೆಳಗಾವಿ ಸೋಲಿಗೆ ಕಾರಣ ತಿಳಿಸಿರುವ ಸಚಿವ ಸತೀಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಜವಾಬ್ದಾರಿ ಸ್ಥಾನದಲ್ಲಿದ್ದಾಗ, ಗೆದ್ದ ನಂತರ ಬೀಗುವುದು ಸೋತಾಗ ಇನ್ನೊಬ್ಬರ ಮೇಲೆ ಎತ್ತಿ ಹಾಕುವದನ್ನು ನಾನು ಎಂದಿಗೂ ಮಾಡಲ್ಲ ಎಂದರು .When you win election you have to be a Large hearted, When you loose you have to be a bord hearted ಎನ್ನುವ ಮೂಲಕ ಚುನಾವಣೆ ಸೋಲಿನ ಬಗ್ಗೆ ಹೇಳಿದರು.

Read All News