ವಿದ್ಯುತ್ ಸಮಸ್ಯೆ ಖಂಡಿಸಿ ಹೆಸ್ಕಾಂ ಗೆ ಮುತ್ತಿಗೆ

  • Shivaraj Bandigi
  • 15 Jan 2024 , 3:24 AM
  • Belagavi
  • 181

ಅಥಣಿ : ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸ್ಥಗಿತ ಖಂಡಿಸಿ ಅಥಣಿ ಹೆಸ್ಕಾಂ ಕಛೇರಿ ಎದುರು ರೈತ ಮುಖಂಡ ಮಹಾದೇವ ಮಡಿವಾಳ ನೇತ್ರತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳು ಪ್ರತಿಭಟಟನೆ ನಡೆಸಿದರು

ಅಥಣಿ ತಾಲೂಕಿನ ಗ್ರಾಮಗಳಿಗೆ ಪ್ರತಿದಿನ ಕೇವಲ ಎರಡು ಘಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿದ್ದು ಮಳೆಯಾಗದೆ ರೈತ ಕಂಗಾಲಾಗುತ್ತಿರುವ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳು ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆಂದು ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತ ಮುಖಂಡ ಮಹಾದೇವ ಮಡಿವಾಳ ಆಕ್ರೋಶ ವ್ಯಕ್ತಪಡಿಸಿ ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು 

ಇನ್ನೂ ಮನವಿ ಸ್ವೀಕರಿಸಿದ ಬಳಿಕ ಹೆಸ್ಕಾಂ ಅಧಿಕಾರಿ ಸಿ ಬಿ ಯಕಂಚ್ಚಿ ಮಾತನಾಡಿ ಎರಡು ದಿನಗಳಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

Read All News