ಬೆಳಗಾವಿ: ದೇಶಾದ್ಯಂತ ಹಿಂದೂಗಳ ಹತ್ಯೆಯನ್ನು ತಡೆಯಲು ಜಿಹಾದಿಗಳ ಮೇಲೆ ಕಠಿಣ ಕ್ರಮ ಕೈಗೊಂಡು ಅವರಿಗೆ ಸಹಾಯ ಮಾಡುವ ಪಿಎಫ್ಐ ಮತ್ತು ಎಸ್ ಡಿಪಿಐ ಸಂಘಟನೆಯನ್ನು ನಿಷೇಧ ಮಾಡುವಂತೆ ಆಗ್ರಹಿಸಿ ಶನಿವಾರ ಹಿಂದೂ ಜನಜಾಗೃತಿ ಸಮಿತಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಹಾದಿಗಳಿಗೆ ಪ್ರಚೋಧಿಸುವವರು ಯಾರು ಎಂಬುದನ್ನು ಬಹಿರಂಗ ಪಡಿಸಬೇಕು. ಈ ಪಿತೂರಿ, ತರಬೇತಿ, ಆಶ್ರಯ, ಸೈದ್ಧಾಂತಿಕ ನಿರ್ದೇಶನ ನೀಡುವಲ್ಲಿ ಭಾಗಿಯಾಗಿರುವ ಮುಖಂಡರು, ಧರ್ಮಗುರುಗಳು, ಚಿಶ್ತಿಗಳು, ಧಾರ್ಮಿಕ ಮುಖಂಡರು ಮತ್ತು ಮತ್ತು ಅನ್ಯಕೋಮಿನ ಸಂಘಟನೆಗಳ ವಿರುದ್ಧ ಸಂಘಟಿತ ಅಪರಾಧ ಕಾಯ್ದೆಯಡಿ ಕಾನೂನು ಬಾಹಿರ ಚಟುವಟಿಕೆಯ ನ್ಯಾಯಾಲಯ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.
ದೇಶ ವಿರೋಧಿ ಚಟುವಟಿಕೆ ನಡೆಸಿರುವ ಸಂಘಟನೆಯನ್ನು ಗಡಿಪಾರು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.