ಖಾಸಗಿ ಬಸ್ ಗಳ ಪ್ರಯಾಣ ಎಷ್ಟು ಸುರಕ್ಷಿತ

  • Shivaraj
  • 28 Dec 2025 , 12:14 AM
  • Bailhongal
  • 68

ಬೈಲಹೊಂಗಲ :  ಸರ್ಕಾರ ಸಕಲ ಸವಲತ್ತುಗಳನ್ನು ಒದಗಿಸಿ, ಪ್ರಯಾಣಿಕರಿಗೆ ಅನೂಕೂಲತೆಗಳನ್ನು ಒದಗಿಸುತ್ತಿದ್ದರೂ ಕೂಡಾ ಖಾಸಗಿ ಬಸ್ ಗಳ ಪ್ರಯಾಣ ಸುಖಕರ ಎಂದು ಅವಲಂಭಿತವಾಗಿರುವ ಪ್ರಯಾಣಿಕರು ಎಷ್ಟರ ಮಟ್ಟಿಗೆ ಸೌಖ್ಯ ಎಂಬ ಪ್ರಶ್ನೆ ಕಾಡತೀರದು.

ನೂರಾರು ಕನಸುಗಳೊಂದಿಗೆ ಒಂದು ಪ್ರದೇಶದಿಂದ ಮತ್ತೊಂಡೆಗೆ ಸಾಗುತ್ತಿರುವಾಗ, ನಾವು ತಲುಪಬೇಕಾದ ಸ್ಥಳವನ್ನು ಸುರಕ್ಷಿತವಾಗಿ ತಲುಪಲು ಸಾಧ್ಯವೆ ಎನ್ನುವಂತಹ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಮೊನ್ನೆಯ ದುರ್ಘಟನೆ ಇದಕ್ಕೆ ಪ್ರಮುಖ ಸಾಕ್ಷಿ. 

ತಲುಪಬೇಕಾದಂತಹ ಸ್ಥಳ ತಲುಪದೆ, ಬೆಳಗಿನ ಜಾವ ನಿದ್ರೆಯಲ್ಲಿರುವ ಅಮಾಯಕರು ಯಾರದೋ ತಪ್ಪಿಗೆ ಚಿರನಿದ್ರೆಗೆ ಜಾರಿದ್ದು ಮಾತ್ರ ಕೆಟ್ಟ ಸಂಗತಿ. 

ಖಾಸಗಿ ಬಸಗಳ ಮೇಲೆ ನಿಗಾ ವಹಿಸಬೇಕಾದವರೆ ತಮ್ಮ ಜವಾಬ್ದಾರಿ ಮರೆತು ನಡೆದಾಗ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಮೊನ್ನೆ ಆದ ದುರ್ಘಟನೆಯಲ್ಲಿ ತಾಯಿ ಮಗು, ಸ್ನೇಹಿತೆಯರು ಮತ್ತು ಇನ್ನೂ ಉಳಿದಂತೆ ಸುಮಾರು 20 ಕ್ಕೂ ಹೆಚ್ಚಿನ ಜನರು ತಮ್ಮ ಪ್ರಾಣ ಕಳೆದುಕೊಂಡರು. ಈ ಮೊದಲು ಸಹ ಇಂತಹ ಘಟನೆ ನಡೆದಿರುವ ಉದಾಹರಣೆಗಳು ಇವೆ. ಸಾಕಷ್ಟು ಸಲ ಈ ರೀತಿಯ ಸನ್ನಿವೇಶಗಳು ನಡೆದಿದ್ದರೂ ಸಹ ಜನರು ಖಾಸಗಿ ಬಸ್ಸಿನತ್ತ ಮುಖ ಮಾಡುತ್ತಿರುವದು ದುರ್ದೈವ. 

ಎಲ್ಲವೂ ಸರಿ ಇಲ್ಲ ಅಥವಾ ಎಲ್ಲವೂ ಸರಿ ಅಂತ ಹೇಳಲೂ ಹಾಗೂ ಊಹಿಸಲು ಸಾಧ್ಯವಾಗದ ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರು ತಮ್ಮ ಸುರಕ್ಷಿತ ಪ್ರಯಾಣದತ್ತ ಗಮನಹರಿಸುವದು ಒಳಿತು.

ವರದಿಗಾರ : ರವಿಕಿರಣ್ ಯಾತಗೇರಿ

Read All News