ಬಾರದ ಮಳೆ ಊರಿನತ್ತ ಮುಖ ಮಾಡಿದ ಬೃಹತ್ ಮೊಸಳೆ

  • Krishna Shinde
  • 15 Jan 2024 , 1:11 AM
  • Belagavi
  • 163

ಅಥಣಿ :ಸರಿಯಾದ ಸಮಯಕ್ಕೆ ಮಳೆ ಬಾರದೆ  ನದಿಯ ನೀರು ಸಂಪೂರ್ಣ ಬತ್ತಿ ಹೋಗಿದೆ, ಈ ಕಾರಣ ಜೀವಜಲ ಪ್ರಾಣಿಗಳು  ಊರಿನತ್ತ ಮುಖ ಮಾಡಿವೆ.

ಅಥಣಿ ತಾಲೂಕಿನ ಕೃಷ್ಣ ನದಿ ದಡದಲ್ಲಿ ಇರುವ ನದಿ ಇಂಗಳಗಾಂವ ಗ್ರಾಮದ ಗಡ್ಡೆಯಲ್ಲಿ ಇಂದು ಬ್ರಹತ್  ಆಕಾರದ ಮೊಸಳೆ ಕಂಡು ಬಂದಿದೆ ಕೂಡಲೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ ಗ್ರಾಮಸ್ಥರು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಗ್ರಾಮಸ್ಥರ ಸಹಾಯದಿಂದ  ಮೊಸಳೆಯನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ.

ಈ ವೇಳೆ ವಲಯ ಅರಣ್ಯಾಧಿಕಾರಿ ಪ್ರಶಾಂತ ಗಾಣಿಗೇರ,ಉಪ ಅರಣ್ಯಾಧಿಕಾರಿ ಎಸ್ ಎಮ್ ಮುಂಜೆ,ಅರಣ್ಯ ಪಾಲಕರಾದ ಸುರೇಶ ಬಾಗಿ,ಮಹಾಂತೇಶ ಚೌಗಲಾ,ರಮೇಶ ಹೊಸಪೇಟೆ, ವಿಕ್ಷಕರಾದ ನಾಗಪ್ಪ ಆಚಾರಟ್ಟಿ,ಮುರಗೇಶ ಠಕ್ಕಣ್ಣವರ, ಸುಪ್ರೀತ ಕೋಳಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ ಎಮ್ ಮಾಯಣ್ಣವರ,ಅದ್ಯಕ್ಷರಾದ ಶಂಕರ ಠಕ್ಕಣ್ಣವರ, ಸದಸ್ಯರಾದ ಸಜೀವ ರಾಚಗೌಡರ,ಮಹಾಂತೇಶ ಪಾಟೀಲ್,ಸೇರಿದಂತೆ ಗ್ರಾಮಸ್ಥರು ಇದ್ದರು.

Read All News