ಬೆಳಗಾವಿ :
ಅಂತಾರಾಷ್ಟ್ರೀಯ ಲಿಂಗಾಯತ ಯುತ್ ವೇದಿಕೆ ವತಿಯಿಂದ ಫೆ.23 ರಿಂದ 25ರವರೆಗೆ ಹುಬ್ಬಳ್ಳಿಯ ವಿಧ್ಯಾನಗರದಲ್ಲಿರುವ ಕೆಎಲ್‌ಇ ಬಿವಿಬಿ ಕಾಲೇಜಿನ ಆವರಣದಲ್ಲಿ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್ ಕ್ಲೀವ್ ಆಯೋಜಿಸಲಾಗಿದೆ ಎಂದು ಐಲೈಫ್ ನ ಅಧ್ಯಕ್ಷ ಅವಿನಾಶ್ ಪಾಳೆಗಾರ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳು, ವೃತ್ತಿಪರರನ್ನು ಒಂದೇ ವೇದಿಕೆಯಡಿ ತರುವುದು ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರ ಬಿಡುಗಡೆ ಮಾಡಿ ಪ್ರಾಯೋಗಿಕ ಮತ್ತು ದಿಟ್ಟ ಉಪಕ್ರಮಗಳನ್ನು ಅಭಿವೃದ್ಧಿ ಪಡಿಸುವ ಆರ್ಥಿಕ, ಕೈಗಾರಿಕೆ, ವ್ಯಾಪಾರಿಕ ಚಟುವಟಿಕೆಗಳನ್ನು ಮುಂದುವರೆಸುವ ಮಾರ್ಗೋಪಾಯಗಳ ಬಗ್ಗೆ ಚರ್ಚಿಸುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.