ಬೆಳಗಾವಿ : ಸರ್ವಧರ್ಮಿಯರು ನಿಷ್ಠೆಯಿಂದ ಬಂದು ಭಕ್ತಿ ಸಮರ್ಪಣೆ ಮಾಡುವ ಮಠ ಬೆಳಗಾವಿ ನಗರದಲ್ಲಿರುವ ಹುಕ್ಕೇರಿ ಹಿರೇಮಠ. ಶ್ರೀಗಳು ಎಲ್ಲಾ ಸಮುದಾಯದವನ್ನು ಸೇರಿಸಿ ಅವರಿಗೆ ಧರ್ಮ ಸಂದೇಶವನ್ನು ನೀಡುತ್ತಿರುವುದು ಅಭಿಮಾನದ ಸಂಗತಿ ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಹೇಳಿದರು.
ಭಾನುವಾರ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು.
ಆಧುನಿಕ ವಚನಕಾರರಾದ ಶ್ರೀಗಳು ಅವರು ವಚನಗಳು ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಅನುವಾದ ವಾಗಿರುವುದು ನಮಗೆ ಅತೀವ ಸಂತಸ ತಂದಿದೆ. ಬೆಳಗಾವಿ ನಗರದಲ್ಲಿ ಅದ್ಬುತವಾದ ಮಠವನ್ನು ನಿರ್ಮಿಸುತ್ತಿದ್ದಾರೆ. ನಾವೆಲ್ಲರೂ ಸಹಕಾರಿಯಾಗಿ ನಿಲ್ಲುವ ಅವಶ್ಯಕತೆ ಇದೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ಬೆಳಗಾವಿಯನ್ನು ಮಾಜಿ ಶಾಸಕರಾದ ಫಿರೋಜ್ ಸೇಠ್ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರ ಸಹೋದರ ಈಗ ಉತ್ತರ ಮತಕ್ಷೇತ್ರದ ಶಾಸಕರಾಗಿ ಆಸೀಫ್ (ರಾಜು) ಸೇಠ್ ಅವರು ಆಯ್ಕೆಯಾಗಿರುವುದು ಅಭಿಮಾನದ ಸಂಗತಿ ಎಂದರು.
ಅವರ ಸಹೋದರ, ಮಾಜಿ ಶಾಸಕ ಫಿರೋಜ್ ಸೇಠ್ ಅವರ ಮಾರ್ಗದರ್ಶನದಲ್ಲಿ ಶಾಸಕ ರಾಜು ಸೇಠ್ ಅಭಿವೃದ್ಧಿ ಕೆಲಸಗಳನ್ನು ಮಾಡಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೆಚ್ಚು ಹೆಚ್ಚು ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ನಿಗಮ ಮಂಡಳದ ನಿಕಟಪೂರ್ವ ಅಧ್ಯಕ್ಷ ಮುಕ್ತಾರ ಹುಸೇನ್ ಪಠಾನ ಹಾಗೂ ಜಂಗಮ ಸಮಾಜದ ಮುಖ್ಯಸ್ಥರಾದ ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರಯ್ಯ ಸವಡಿ ಸಾಲಿಮಢ, ವಿಜಯ ಶಾಸ್ತ್ರೀಗಳು, ಕಾಂಗ್ರೆಸ್ ಮುಖಂಡರಾದರ ರಾಜು ಪಾಟೀಲ, ಪ್ರವೀಣ ಮೋತಿಮಠ, ಡಾ.ದಿನೇಶ ನಾಶಿಪುಡಿ, ಪರಶುರಾಮ ಒಗ್ಗಣ್ಣವರ, ನಾನಾಗೌಡ ಬಿರಾದಾರ, ಬುಡಾ ಎಂಜಿನಿಯರ್ ಎಂ.ವಿ.ಹಿರೇಮಠ ಉಪಸ್ಥಿತರಿದ್ದರು.