ರೋಟರಿ ಕ್ಲಬ್ ಅಧ್ಯಕ್ಷರಿಗೆ ಹುಕ್ಕೇರಿ ಶ್ರೀಗಳ ಶ್ರೀರಕ್ಷೆ

  • Shivaraj Bandigi
  • 15 Jan 2024 , 3:39 AM
  • Belagavi
  • 222

ಬೆಳಗಾವಿ : ನಗರದ ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಅಳವಣಿ ಇವರಿಗೆ ಸೋಮವಾರ ಬೆಳಗಾವಿ ನಗರದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸನ್ಮಾನಿಸಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಅಧಿಕಾರ ಇದು ಅವಕಾಶ ಇದ್ದ ಹಾಗೆ. ಈ ಅವಕಾಶದ ಅವಧಿಯಲ್ಲಿ ಜನಪರ ಕಾರ್ಯವನ್ನು ಮಾಡಬೇಕು. ರೋಟರಿ ಕ್ಲಬ್ ದೀನ ದಲಿತರ, ವಯೋವೃದ್ಧರ ಮತ್ತು ಶಾಲಾ ಮಕ್ಕಳಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡುತ್ತ ಬಂದಿದೆ. ಮಂಜುನಾಥ ಅಳವಣಿ ಅವರು ಇನ್ನೂ ಹೆಚ್ಚಿನ ಸಾಮಾಜಿಕ ಕಾರ್ಯ ಮಾಡಿ ಎಲ್ಲರ ಮನಸ್ಸನ್ನು ಗೆಲ್ಲಲ್ಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರೋಟರಿ ಕ್ಲಬ್ ನೂತನ ಅಧ್ಯಕ್ಷ ಮಂಜುನಾಥ ಅಳವಣಿ,  ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಎಲ್ಲಾ ರಂಗದಲ್ಲಿ ಇರುವವರನ್ನು ಕರೆಸಿ ಆಶೀರ್ವದಿಸಿ ಕಳುಹಿಸುತ್ತಾರೆ. ಅಲ್ಲದೆ, ಅವರರವರ ರಂಗದಲ್ಲಿ ಯಾವ ರೀತಿ ಕಾರ್ಯ ಮಾಡಬೇಕೆಂದು ಸದಾ ಕಾಲ ಮಾರ್ಗದರ್ಶನ ಮಾಡುತ್ತಾರೆ.

ನಾನು ರೋಟರಿ ಕ್ಲಬ್ ಅಧ್ಯಕ್ಷನಾಗಿ ಆಯ್ಕೆಯಾದ ಮೇಲೆ ನನಗೆ ಆಹ್ವಾನ ನೀಡಿ ಆಶೀರ್ವದಿಸಿ ಜನಪರ ಕಾರ್ಯ ಮಾಡಲು ಮಾರ್ಗದರ್ಶನ ನೀಡಿದ್ದಾರೆ. ಖಂಡಿತವಾಗಿಯೂ ನಮ್ಮ ಎಲ್ಲ ಸದಸ್ಯರ ಮಾರ್ಗದರ್ಶನ ದಲ್ಲಿ ಉನ್ನತ ಕಾರ್ಯವನ್ನು ಮಾಡುತ್ತೇನೆ. ನಮ್ಮಲ್ಲಿರುವ ಪದಾಧಿಕಾರಿಗಳು ಉತ್ಸಾಹಿಗಳಾಗಿದ್ದಾರೆ. ಜನ ಮೆಚ್ಚುವ ಹಾಗೂ ಗುರು ಮೆಚ್ಚುವ ಕಾರ್ಯ ಮಾಡುತ್ತೇನೆ ಎಂದರು.

ಈ‌ ಸಂದರ್ಭದಲ್ಲಿ ಬೆಂಗಳೂರಿನ ಡಾ. ಕೆ.ಭೀಮಾ, ಅಪ್ಪಾಜಿ ಗೌಡರ, ರವೀಂದ್ರ ಕುಮಾರ, ಪ್ರವೀಣ, ಬೆಳಗಾವಿಯ ಕಲ್ಲಪ್ಪ ಬೋರಣ್ಣವರ, ಗುಳೆದಗುಡ್ಡದ ಶ್ರೀಧರ ಶೆಟ್ಟರ, ಹಾರೋಗೆರಿಯ ವೀರನಗೌಡ ಪಾಟೀಲ, ಜಮಖಂಡಿ ಬಸವರಾಜ ಕಾಜಗಾರ, ಖ್ಯಾತ ವಾಸ್ತು ತಜ್ಞ ಶ್ರೀಧರ ಪರಿಮಳಾಚಾರ್ಯ ಬಳ್ಳಾರಿ ಉಪಸ್ಥಿತರಿದ್ದರು.

Read All News