ಮತಕ್ಷೇತ್ರದ ಅಭಿವೃದ್ಧಿ ಮಾಡಿ ಪ್ರಾಮಾಣಿಕ ಸೇವೆ ಮಾಡಿದ ತೃಪ್ತಿ ನನಗಿದೆ :- ಶಾಸಕ ಮಹೇಶ ಕುಮಠಳ್ಳಿ

  • 6 Jan 2024 , 1:20 PM
  • Belagavi
  • 135

ಅಥಣಿ : ಜನರೊಂದಿಗರ ಬೇಳೆದ ನನಗೆ ಸಾರ್ವಜನಿಕರ ಸಮಸ್ಯೆಗಳ ಅರಿವು ನನಗಿದೆ ಅದನ್ನ ಪ್ರಮಾಣಿಕವಾಗಿ ಬಗಹರಿಸಿದ್ದೇನೆ ಎನ್ನುವ ತೃಪ್ತಿ ನನಗಿದೆ , ಮತಕ್ಷೇತ್ರದ ಸಮಸ್ಯೆ ನಿವಾರಣೆಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ತಂದು ಗ್ರಾಮೀಣ ಭಾಗದ ಅಭಿವೃದ್ದಿಯೇ ನನ್ನ ಮೊದಲ ಆದ್ಯತೆ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.

ಅವರು ಸೋಮವಾರು ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ 51 ಲಕ್ಷ ರೂ ವೆಚ್ಚದ ಜಲ ಜೀವನ್ ಮಿಶನ್ ಕಾಮಗಾರಿಗೆ, ಸವದಿ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದ ಸವದಿ ಗ್ರಾಮದ ದರ್ಗಾ ಧರ್ಮಶಾಲೆ ಭವನ ಕಾಮಗಾರಿ, 14 ಲಕ್ಷ ರೂ ವೆಚ್ಚದ ಸವದಿ ದರ್ಗಾ ಉರ್ದು ಶಾಲೆ ಕೊಠಡಿ ನಿರ್ಮಾಣ ಕಾಮಗಾರಿ, 1 ಕೋಟಿ 25 ಲಕ್ಷ ರೂ ವೆಚ್ಚದ ಸವದಿ ಗ್ರಾಮದಿಂದ ಸವದಿ ಆರ್.ಸಿ ವರೆಗೆ ರಸ್ತೆ ಕಾಮಗಾರಿ, 1 ಕೋಟಿ 60 ಲಕ್ಷ ರೂ ವೆಚ್ಚದ ಸವದಿ ಗ್ರಾಮದ ಕರಿಸಿದ್ದನ ರಸ್ತೆ ಕಾಮಗಾರಿ, 1 ಕೋಟಿ 60 ಲಕ್ಷ ರೂ ವೆಚ್ಚದ ಸವದಿ ಗ್ರಾಮದಿಂದ ಮಹಿಷವಾಡಗಿ (ಡ್ಯಾಂ) ರಸ್ತೆ ಕಾಮಗಾರಿ, 1 ಕೋಟಿ 60 ಲಕ್ಷ ರೂ ವೆಚ್ಚದ ಸವದಿಯಿಂದ ಕೊಡಗಾನೂರ ರಸ್ತೆ ಕಾಮಗಾರಿ, 2 ಕೋಟಿ 10 ಲಕ್ಷ ರೂ ವೆಚ್ಚದ ಸವದಿ ಗ್ರಾಮದಿಂದ ಬಳವಾಡ ರಸ್ತೆ ಕಾಮಗಾರಿ, 14 ಲಕ್ಷ ರೂ ವೆಚ್ಚದ ಸವದಿ ಕನ್ನಡ ಪ್ರಾಥಮಿಕ ಶಾಲೆ 1 ಕೊಠಡಿ ಕಾಮಗಾರಿ, 1 ಕೋಟಿ 36 ಲಕ್ಷ ರೂ ವೆಚ್ಚದ ಸವದಿ ಗ್ರಾಮದಲ್ಲ ಜಲ ಜೀವನ ಮಿಷನ ಯೋಜನೆಯ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಒಟ್ಟು ೮.೩೫ ಲಕ್ಷ ರೂಗಳ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಸವದಿ ಹಾಗೂ ದರ್ಗಾ ಗ್ರಾಮ ಕೃಷ್ಣಾ ನದಿಯ ದಡದಲ್ಲಿ ಇರುವುದರಿಂದ ಇಲ್ಲಿ ನದಿಯ ನೀರಿನ‌ ಹರಿವಿನಿಂದ ಜಮೀನಿನ‌ ಫಲವತ್ತಾದ ಮಣ್ಣು ಕೊಚ್ಚಿ ಹೋಗುವುದನ್ನು ತಡೆಗಟ್ಟುವ ಸಲುವಾಗಿ ನಾನು ವಿಶೇಷ ಪ್ರಯತ್ನ ಮಾಡಿ 28.50 ಕೋಟಿ ರೂ ಅನುದಾನವನ್ನು ತಡೆಗೋಡೆ ಕಟ್ಟಲು ಮಂಜೂರು ಮಾಡಿಸಿದ್ದು ಕೆಲವೇ ದಿನಗಳನ್ನು ಆ ಕಾಮಗಾರಿಗೆ ಚಾಲನೆ ನೀಡಿ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುವೆ ಎಂದು ಹೇಳಿದರು.

ಈ ವೇಳೆ ಅಧಿಕಾರಿಗಳಾದ ವೀರಣ್ಣ ವಾಲಿ,ಬಿಇಓ ಬಸವರಾಜ ತಳವಾರ  ಮುಖಂಡರಾದ ನಿಂಗಪ್ಪ ನಂದೇಶ್ವರ, ಡಿ‌ ಬಿ ಠಕ್ಕಣ್ಣವರ, ಶಿವಕುಮಾರ ಪಾಟೀಲ, ಹುಸೇನ ಮುಲ್ಲಾ, ಸಂಗಪ್ಪ ಅವಟಿ, ರಾಚುಗೌಡ ಪಾಟೀಲ, ನಿಂಗಪ್ಪ ಸಾರವಾಡ, ಸಂಗಪ್ಪ ಪಾಟೀಲ, ಗುರುಲಿಂಗ ಗಾಳಿ, ಶಿವಗೌಡಾ ಪಾಟೀಲ, ಗುತ್ತಿಗೆದಾರರಾದ ಮುರಗೆಪ್ಪಾ ನಾಯಿಕ, ಬಸವರಾಜ ದರೂರ, ರಮೇಶ ಧುಮಾಳೆ, ಶಿವಾನಂದ ಸಂಕ್ರಟ್ಟಿ, ಅರ್ಜುನ ನಾಯಿಕ, ಎ ಕೆ ಪಾಟೀಲ, ವಿಜಯ ಲಕ್ಕೆಗೌಡರ, ಅಕ್ಷಯ ಕುಲಕರ್ಣಿ, ಸೇರಿದಂತೆ ಅನೇಕರು  ಉಪಸ್ಥಿತರಿದ್ದರು.

ವರದಿ ಅಜೀತ ಕಾಂಬಳೆ ಲೋಕಲ್ ವಿವ ನ್ಯೂಸ್ ಅಥಣಿ

Read All News