ಐ ಸ್ಟಾಂಡ್ ವಿಥ್ ಸಿದ್ದರಾಮಯ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

  • krishna s
  • 17 Aug 2024 , 10:01 PM
  • Bengaluru
  • 354

ಬೆಂಗಳೂರು: ಸಿದ್ದರಾಮಯ್ಯನವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (MUDA) ಭೂಹಂಚಿಕೆ ಹಗರಣದ ಆರೋಪದ ವಿರುದ್ಧ ಸಿಡಿದೆದ್ದಿದ್ದು, ಅವರ ಬೆಂಬಲಿಗರು #IStandWithSiddaramaiah ಹ್ಯಾಶ್‌ಟ್ಯಾಗ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ಹ್ಯಾಶ್‌ಟ್ಯಾಗ್ ಈಗ ರಾಜ್ಯದಾದ್ಯಂತ ಟ್ರೆಂಡಿಂಗ್ ಆಗಿದ್ದು, ಸಾವಿರಾರು ಮಂದಿ ತಮ್ಮ ಬೆಂಬಲವನ್ನು ಗಟ್ಟಿಯಾಗಿ ವ್ಯಕ್ತಪಡಿಸುತ್ತಿದ್ದಾರೆ.

ಸಿದ್ದರಾಮಯ್ಯ ಅವರು ಈ ಆರೋಪಗಳನ್ನು ತೀವ್ರವಾಗಿ ತಿರಸ್ಕರಿಸಿದ್ದು, ಇವು ರಾಜಕೀಯ ಶಡಯಂತ್ರವಾಗಿವೆ ಎಂದು ಹೇಳಿದ್ದಾರೆ.

ನಾನು ರಾಜೀನಾಮೆ ನೀಡುವುದಿಲ್ಲ, ನಾನು ತಪ್ಪು ಮಾಡಿಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮತ್ತು ಸಂಪೂರ್ಣ ಕ್ಯಾಬಿನೆಟ್ ಅವರ ಬೆಂಬಲದಲ್ಲಿದೆ ಎಂದು ಅವರು ಜಾಹೀರಾತು ಮಾಡಿದ್ದು, ಬೆಂಬಲಿಗರು ಸಿದ್ದರಾಮಯ್ಯನವರಿಗೆ ನ್ಯಾಯ ದೊರೆಯುವವರೆಗೆ ಹೋರಾಟ ಮಾಡುತ್ತಿರುವುದು ಸ್ಪಷ್ಟವಾಗಿದೆ.

Read All News