ನಾನು ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ: ಸವದಿ

  • shivaraj bandigi
  • 6 Feb 2024 , 9:20 AM
  • Belagavi
  • 446

ಅಥಣಿ : ನಾನು ಬೀದರ್ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ದೆ ಮಾಡುತ್ತೇನೆ ಎಂದು ಊಹಾಪೋಹಗಳು ಕೇಳಿ ಬರುತ್ತಿವೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಹೊಗುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆ ಸ್ವರ್ಧೆ ಮಾಡುವುದಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಮಾದ್ಯಮಗಳಿಗೆ ಸ್ಪಷ್ಟನೆ ನೀಡಿದರು.

ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಕ್ಕಂಚ್ಚಿ ಗ್ರಾಮದಲ್ಲಿ ಮಾದ್ಯಮಳ ಜೊತೆ ಮಾತನಾಡುತ್ತಾ, ನಾನು ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಕೇಳಿ ಬರುತ್ತಿವೆ ನಾನು ಮಾದ್ಯಮದಲ್ಲಿ ನೋಡಿ ಅಚ್ಚರಿ ಮೂಡಿಸಿದೆ ಎತ್ತನ ಮಾಮರ ಎತ್ತನ ಕೋಗಿಲೆ ಎತ್ತಿಂದ ಎತ್ತ ಸಂಬಂಧವಯ್ಯಾ, ಯಲ್ಲಿಂದ ಯಲ್ಲಿಗೆ ಸಂಬಂದ ಆ ಸುದ್ದಿಗಳು ಎಲ್ಲವೂ ಸುಳ್ಳು ನಾನು ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆ ಸ್ವರ್ಧೆ ಮಾಡುವುದಿಲ್ಲ ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿಲ್ಲ, ನನಗೆ ಅಥಣಿ ಕ್ಷೇತ್ರದ ಜನರು ಆಶಿರ್ವಾದ ಮಾಡಿದ್ದಾರೆ ಅಥಣಿ ಕ್ಷೇತ್ರದ ಜನರು ಶಾಸಕರಾಗಿ ಇರುವಂತೆ ಆದೇಶವನ್ನು ಮಾಡಿದ್ದಾರೆ ನಾನು ಶಾಸಕನಾಗಿ ಇರುತ್ತಾನೆ ಎಂದು ಪ್ರತಿಕ್ರಿಯಿಸಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಅನುಸರಿಸುತ್ತಿದೆ ಕೇಂದ್ರ ಸರ್ಕಾರದ ನೀತಿಯನ್ನು ನಾವು ಖಂಡಿಸುತ್ತೇವೆ ನಮಗೆ ಬರಬೇಕಾದ ಅನುದಾನ ಪಾಲನ್ನು ಕೊಡುತ್ತಿಲ್ಲ.

ಇದರಿಂದ ನಾವು ಸಿಎಂ ಸಮ್ಮುಖದಲ್ಲಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡುತ್ತೇವೆ. ದೆಹಲಿಯಲ್ಲಿ ಕುಳಿತು ಸಾಂಕೇತಿಕ ಪ್ರತಿಭಟನೆ ಮಾಡುತ್ತೇವೆ, ಕೇಂದ್ರ ದಿಂದ ಬರಬೇಕಾದ ಅನುದಾನ ಬರುತ್ತಿಲ್ಲ,

೧೩೬ ಶಾಸಕರು ಜೊತೆಯಾಗಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ, ಇಲ್ಲಿ ಬರಗಾಲ ಇರುದರಿಂದ ನಮಗೆ ಬರ ಪರಿಹಾರ ಕೊಡುತ್ತಿಲ್ಲ ಇದರಿಂದ ಕೇಂದ್ರ ಸರ್ಕಾರ ಗಮನವನ್ನು ಸೇಳೆಯುದಕ್ಕೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು. 

ಅಥಣಿ ಮತಕ್ಷೇತ್ರಕ್ಕೆ ಹೊಸ ಸರ್ಕಾರದಿಂದ ಅನುದಾನ ಬಿಡುಗಡೆ: 

ನೂತನವಾಗಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ವಿವಿಧ ಇಲಾಖೆಗಳಿಂದ ಅಥಣಿ ಮತಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ತರಲಾಗುತ್ತಿದೆ, ಅಥಣಿ ತಾಲೂಕಿನಲ್ಲಿ ವಿವಿಧ ಯೋಜನೆಗಳ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿದೆ, ಅಥಣಿ ಪಟ್ಟಣದ ಭಾಗೀರಥಿ ಹಳ್ಳಕ್ಕೆ 10 ಕೋಟಿ ಅನುದಾನ ಬಿಡುಗಡೆಯಾಗಿದೆ, ಅಥಣಿ ಪಟ್ಟಣದ ಕೆರೆ ಅಭಿವೃದ್ಧಿಗೆ 20 ಕೋಟಿ ಅನುದಾನ ಬಿಡುಗಡೆಯಾಗಿದೆ, ಪುರಸಭೆ ಇಲಾಖೆಯಿಂದ 10 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ, ಸಿದ್ದರಾಮಯ್ಯ ಅವರು ಹಣಕಾಸು ಸಚಿವರು ಆಗಿದ್ರಿಂದ ಅಥಣಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ ಇದರಿಂದ ಹಲವು ರಸ್ತೆ ಕಾಮಗಾರಿಗಳು ನಡೆಯುತ್ತಿವೆ, ಗ್ಯಾರೆಂಟಿ ಯೋಜನೆಗಳಿಂದ ಅನುದಾನ ಕೊರತೆ ಇದ್ದರೂ ಎಲ್ಲಾ ಶಾಸಕರಿಗೂ 30 ರಿಂದ 40 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಇದರಲ್ಲಿ ಅಥಣಿಯು ಕೂಡ ಒಂದು ಎಂದು ಸವದಿ ಪ್ರತಿಕ್ರಿಯೆ ನೀಡಿದರು. 

Read All News