ಯೋಗದಿಂದ ಆರೋಗ್ಯ ವೃದ್ದಿ! ಸುನೀಲ ಮರಕುಂಬಿ

  • shivaraj bandigi
  • 22 Jun 2024 , 11:52 AM
  • Bailhongal
  • 4958

ಬೈಲಹೊಂಗಲ :  ಪ್ರತಿದಿನ ಯೋಗ ಮಾಡುವದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುವದೆಂದು ಮಾ ಭಾರತಿ ಸೇವಾ ಫೌಂಡೇಶನ್ ಅಧ್ಯಕ್ಷ ಸುನೀಲ ಮರಕುಂಬಿ ಹೇಳಿದರು.

ಅವರು ತಾಲೂಕಿನ ಆನಿಗೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿ, ಯೋಗ ಕೇವಲ ಒಂದೇ ದಿನಕ್ಕೆ ಸೀಮಿತವಾಗದೆ ನಿತ್ಯವಾಗಬೇಕೆಂದರು. 

ಪ್ರತಿದಿನ ಯೋಗದಲ್ಲಿ ನಿರತರಾಗುವದರಿಂದ ಆರೋಗ್ಯ ವೃದ್ದಿಯ ಜೊತೆಗೆ ಮಾನಸಿಕ ನೆಮ್ಮದಿಯನ್ನು ಸಹ ಪಡೆಯಲು ಅನೂಕೂಲವಾಗುತ್ತದೆ. ಭಾರತೀಯ ಸನಾತನ ಸಂಸ್ಕೃತಿಯ ಪ್ರತೀಕವಾಗಿರುವ ಯೋಗವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿ, ಜೂನ 21 ನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಯಾಗಿ ಆಚರಿಸಲು ನಿರ್ಧಾರ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು ಎಂದರು.

ವರದಿ  : ರವಿಕಿರಣ್  ಯಾತಗೇರಿ

Read All News