ಬೈಲಹೊಂಗಲ : ನಮಗೆ ದೊರೆತಿರುವ ಸ್ವಾತಂತ್ರ್ಯದ ಹಿಂದೆ ಹಲವಾರು, ಸಾಧು,ಸಂತರ ಹೋರಾಟಗಾರರ ತ್ಯಾಗ ಅಡಗಿದೆ ಎಂದು ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯ ಮೈದಾನದಲ್ಲಿ 77 ನೇ ಸ್ವಾತಂತ್ಯೋತ್ಸವದ ನಿಮಿತ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶಕ್ಕಾಗಿ ಮಡಿದ ವೀರರ, ಹೋರಾಟಗಾರರ ಸ್ಮರಣೆ ನಿತ್ಯವಾಗಬೇಕು. ಅವರ ತ್ಯಾಗದ ಪರಿಶ್ರಮದ ಪ್ರತೀಕವಾಗಿ ಇಂದು ನಾವೆಲ್ಲ ಸ್ವತಂತ್ರರಾಗಿದ್ದೇವೆ ಎಂದರು.
ಅಂತಹ ಮಹಾನ ವ್ಯಕ್ತಿಗಳ ಕುರಿತು ಇಂದಿನ ಯುವ ಪೀಳಿಗೆಗೆ ತಿಳಿಸುವ ಮೂಲಕ ಅವರಲ್ಲಿ ದೇಶಭಕ್ತಿ ಮೂಡಿಸಬೇಕಾಗಿದೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಿಎಸ್ಐ ಗುರುರಾಜ ಕಲ್ಬುರ್ಗಿ ನೇತೃತ್ವದಲ್ಲಿ ಪೊಲೀಸ್, ಶಾಲಾ,ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ತಹಶೀಲ್ದಾರ ಸಚ್ಚಿದಾನಂದ ಕುಚನೂರ ಸ್ವಾಗತಿಸಿದರು.
ವೇದಿಕೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ, ಡಿವೈಎಸ್ಪಿ ರವಿ ನಾಯಕ, ಸಿಪಿಐ ಪಂಚಾಕ್ಷರಿ ಸಾಲಿಮಠ ಇದ್ದರು.