ಬೆಳಗಾವಿ : ಭಾರತ ದೇಶವು ಎಲ್ಲ ಧರ್ಮ, ಜಾತಿಯ ಜನರು ಅನ್ಯೋನತೆ, ಸಹೋದರರಂತೆ ಬಾಳುತ್ತಿರುವ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ ಎಂದು ರಾಯಣ್ಣ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ರಾಜು ಸೊಗಲ ಹೇಳಿದರು .
ಅವರು ನೆಹರು ನಗರದ ಎಸ್.ಜಿ. ಬಾಳೇಕುಂದ್ರಿ ಇನಸ್ಟಿಟ್ಯೂಟ್ ಆಫ್ ಇಂಜನೀಯರ್ಸ್ ಹಾಲ್ ನಲ್ಲಿ ಜರಿಗಿದ ಸರ್ವಧರ್ಮ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅಶೋಕ ಖೇಣಿ ಯೂತ್ ಮೂವಮೆಂಟ್ ವತಿಯಿಂದ, ಅಶೋಕ ಖೇಣಿಯವರ ಅಮೃತ ಮಹೋತ್ಸವದ ಅಂಗವಾಗಿ ಅಕ್ಟೋಬರ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಸರ್ವ ಧರ್ಮ ಸಮ್ಮೇಳನದಲ್ಲಿ ದೇಶದ ಸುಮಾರು ಮೂರು ಸಾವಿರ ಸ್ವಾಮೀಜಿಗಳು ಭಾಗವಹಿಸುತ್ತಿದ್ದಾರೆ ಎಂದರು.
ಪೂರ್ವಭಾವಿ ಸಭೆಯ ಸಾನ್ನಿಧ್ಯವನ್ನು ಗದಗ ತೋಂಟದಾರ್ಯ ಮಠದ ಸ್ವಾಮಿಜಿ ವಹಿಸಿದ್ದರು.
ವೇದಿಕೆಯ ಮೇಲೆ ಕಾರಂಜಿಮಠದ ಸ್ವಾಮಿಜಿ, ಅಥಣಿ ಗಚ್ಚಿನಮಠದ ಸ್ವಾಮಿಜಿ, ನಿಡಸೋಸಿ ಮಠದ ನಿಜಲಿಂಗೇಶ್ವರ ಸ್ವಾಮಿಜಿ ಹಾಗೂ
ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮಿಜಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಅಶೋಕ ಖೇಣಿ ಯೂತ್ ಮೂವಮೆಂಟ್ ರಾಜ್ಯಾಧ್ಯಕ್ಷ ನಾಗೇಂದ್ರ ಪ್ರಸಾದ ಹಾಗೂ ಸಮಾಜದ ಮುಖಂಡರು ಇದ್ದರು. ಮಂಜುನಾಥ ಶರಣಪ್ಪನವರ ನಿರೂಪಿಸಿದರು, ರಾಜ್ಯಾಧ್ಯಕ್ಷ ನಾಗೇಂದ್ರ ಪ್ರಸಾದ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಶಿವಾನಂದ ತಂಬಾಕೆ ವಂದಿಸಿದರು.
ಸಭೆಯಲ್ಲಿ ಸಮಾಜದ ಹಿರಿಯರು, ಸಾರ್ವಜನಿಕರು ಇದ್ದರು.
ವರದಿ : ರವಿಕಿರಣ್ ಯಾತಗೇರಿ