ಬಾಗ್ಲಿಹಾರ್ ಅಣೆಕಟ್ಟಿಗೆ ಬೀಗ ಜಡಿದ ಭಾರತ – ಪಾಕಗೆ ಜಲಕಂಟಕ ಶುರು!

  • krishna s
  • 6 May 2025 , 3:03 AM
  • Jammu&Kashmir
  • 2912

ಜೆ & ಕೆ :ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿರುವ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಎಲ್ಲಾ ಗೇಟ್‌ಗಳನ್ನು ಇಂದು ಭಾರತ ಮುಚ್ಚಿದ್ದು, ಇದು ರಾಷ್ಟ್ರಭದ್ರತೆ ಮತ್ತು ಭಾರತದ ನೀರಿನ ಹಕ್ಕು ಕಾಯ್ದುಕೊಳ್ಳುವ ದಿಟ್ಟ ಹೆಜ್ಜೆಯಾಗಿದೆ.

ಪಾಹಲ್‌ಗಾಂ ದಾಳಿ ಬಳಿಕ ಭಾರತ ಇಂಡಸ್ ಜಲ ಒಪ್ಪಂದವನ್ನು ಮತ್ತೆ ಪರಿಷೀಲಿಸುವ ನಿರ್ಧಾರ ತೆಗೆದುಕೊಂಡಿದ್ದು, ಪಾಕಿಸ್ತಾನಕ್ಕೆ ಭಾರತ ತನ್ನ ಜಲಸಂಪತ್ತಿಗೆ ಇರುವ ಹಕ್ಕನ್ನು ಮರೆತಿಲ್ಲ ಎಂಬ ಸಂದೇಶವನ್ನು ನೀಡಿದೆ. 

ಮೇ 1ರಿಂದ ಡಿ-ಸಿಲ್ಟಿಂಗ್ ಆಪರೇಶನ್ ಹೆಸರಿನಲ್ಲಿ ಪ್ರಾರಂಭವಾದ ಈ ಕ್ರಮವು ಅಣೆಕಟ್ಟಿನ ಶಕ್ತಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ತಾಂತ್ರಿಕ ಕಾರ್ಯವಷ್ಟೇ ಅಲ್ಲ, ರಾಷ್ಟ್ರೀಯ ಹಿತದೃಷ್ಟಿಯಿಂದಲೂ ಅತ್ಯಂತ ಸೂಕ್ತವಾಗಿದೆ.

ಪಾಕಿಸ್ತಾನ ಜಮೀನುಗಳಿಗೆ ನೀರು ಕಡಿಮೆಯಾಗುತ್ತಿದೆ ಎಂಬ ಆಪಾದನೆಗಳ ನಡುವೆಯೂ, ಭಾರತ ತನ್ನ ಒಳನಾಡು ಅಭಿವೃದ್ಧಿಗೆ ಜಲಸಂಪತ್ತು ಬಳಸಿಕೊಳ್ಳುವುದರಲ್ಲಿ ಯಾವುದೇ ಅಕ್ರಮವಿಲ್ಲ. ಬಾಗ್ಲಿಹಾರ್ ಅಣೆಕಟ್ಟು ಭಾರತದಲ್ಲಿ ನಿರ್ಮಾಣಗೊಂಡಿದ್ದು, ಅದರ ನಿರ್ವಹಣೆ ಸಂಪೂರ್ಣವಾಗಿ ಭಾರತಕ್ಕೆ ಸೇರಿದೆ.

ಈ ಕ್ರಮದಿಂದಾಗಿ ಪಾಕಿಸ್ತಾನಕ್ಕೆ ನೋಟಿಸ್ ನೀಡದೆ ನೀರಿನ ಹರಿವು ನಿಯಂತ್ರಿಸುವ ಮೂಲಕ ಭಾರತ ತನ್ನ ಸ್ವಾಯತ್ತತೆಯ ಹಕ್ಕನ್ನು ಚಟುವಟಿಕೆಯಿಂದ ಬಳಸಿದ್ದು, ದೇಶದ ಹಿತಕ್ಕಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಗಂಭೀರ ತೀರ್ಮಾನಗಳಿಗೂ ಭಾರತ ಸಿದ್ಧವಾಗಿದೆ ಎಂಬುದು ಸ್ಪಷ್ಟವಾಗಿದೆ.

Read All News