ಕುಡುಒಕ್ಕಲಿಗ ಸಮೂದಾಯಕ್ಕೆ ಪ್ರವರ್ಗ-3ಎ” ಮೀಸಲಾತಿ ನೀಡಲು ಒತ್ತಾಯ

  • 15 Jan 2024 , 3:31 AM
  • Belagavi
  • 993

ಬೆಳಗಾವಿ :ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ಕಲ್ಯಾಣ ಕರ್ನಾಟಕ/ಸುವರ್ಣ ಕರ್ನಾಟಕ ಹಾಗೂ ಮಧ್ಯಕರ್ನಾಟಕ “ಕುಡುಒಕ್ಕಲಿಗ ಸಮುದಾಯವು ಬಯಲು ಸೀಮೆಯ ಅಪ್ಪಟ ಶ್ರಮಜೀವಿ ಹಾಗು ಭೂಮಿಯೋಡನೆ ನೇರ ಸಂಬಂಧವಿಟ್ಟುಕೊಂಡಿರುವ ಶುದ್ಧ ರೈತಾಪಿ ಜನಾಂಗ, ಈ ಸಮುದಾಯವು ರಾಜಕೀಯ, ಸಾಮಾಜಿಕ ಆರ್ಥಿಕ, ಶೈಕ್ಷಣಿಕ ಹಾಗೂ ಸಂಸ್ಕೃತಿಕ ಕ್ಷೇತ್ರಗಳಲ್ಲಿ ಸಂವಿಧಾನ ಆಸಯದಂತೆ ಸರ್ಕಾರದಿಂದ ಸಿಗಬೇಕಾದ ಮೀಸಲಾತಿ-ಪ್ರಾತಿನಿಧ್ಯ, ಪ್ರೋತ್ಸಾಹ ದೊರಕುತ್ತಿಲ್ಲವೆಂದು ತಮ್ಮಲ್ಲಿ ವಿಷಾದಿಸಿದ್ದಾರೆ.

“ಕುಡುಒಕ್ಕಲಿಗ” ಜಾತಿ ಜನರು ಅಂದಿನಿಂದ ಇಂದಿನವರೆಗೂ ಅನಕ್ಷರಣೆ, ಮೂಢನಂಬಿಕೆ ಬಯಲುಸೀಮೆ, ಗಡಿಭಾಗದಲ್ಲಿ ಒಣಬೇಸಾಯ, ಮಳೆ ಅವಲಂಬಿತ ಕೃಷಿ ಇಂತಹ ಅತಿ ಹಿಂದುಳಿದ ಸಮುದಾಯಗಳ ಜನರು ಬದುಕಿನಲ್ಲಿ ಮುನ್ನಲೆಗೆ ಬರುವಂತೆ ಘನ ರಾಜ್ಯ ಸರ್ಕಾರ ಇವರಿಗೆ ಸಾಮಾಜಿಕೆ' ನ್ಯಾಯ ದೊರಕಿಸಿಕೊಡುವುದು,ನ್ಯಾಯೋಚಿತವಾಗಿರುತ್ತದೆ ಎಂದು ಹೇಳಿದ್ದಾರೆ.

ಈ ಕುಡುಒಕ್ಕಲಿಗ ಜಾತಿಯ ಕುಲ-ಬೆಡಗು, ಸಂಪ್ರದಾಯ ಅಚರಣೆಗಳು ಹೆಚ್ಚು ಕಡಿಮೆ ಒಕ್ಕಲಿಗ ಜಾತಿ ಸಮುದಾಯ ಅನುಸರಣೆ ಇದೆ. ಈ ಕುಡುಒಕ್ಕಲಿಗ ಜಾತಿಯು ಒಕ್ಕಲಿಗ, ಉಪಜಾತಿಯಾಗಿದ್ದು, ಈ ಸಮುದಾಯ ಲಿಂಗಾಯತ-ವೀರಶೈವ ಸಮುದಾಯದಂತೆ ಆಚರಣೆ-ವಿಚಾರಣೆ ಇರುವುದಿಲ್ಲ, ಮತ್ತು ಕುಡು-ಒಕ್ಕಲಿಗ ಸಮುದಾಯದವರು ಯಾವದೇ ಕಾರಣಕ್ಕೂ ಲಿಂಗಾಯತ-ವೀರಶೈವ ಸಮೂದಾಯದ ಸಂಗಡ ವಿವಾಹ ಸಂಬಂದಗಳು ಇರುವುದಿಲ್ಲ, ಮತ್ತು ವೀರಶೈವ-ಲಿಂಗಾಯತ ಸಮುದಾಯದಲ್ಲಿ ಮರುಮುದವೆ ಸಂಪ್ರದಾಯ ಇರುತ್ತದೆ, ಆದರೆ ಕುಡುಒಕ್ಕಲಿಗ ಸಮುದಾಯದಲ್ಲಿ ಇನ್ನೂವರಿಗೆ ಮರುಮದುವೆ ಸಂಪ್ರಾದಯ ಇರುವುದಿಲ್ಲ, ಈ ಸಮುದಾಯವು ಎಲ್ಲಾ ರೀತಿಯಲ್ಲೂ ಹಿಂದುಳಿದ್ದರು ಮೊದಲಿನಿಂದಲೂ ಇಂದಿನವರೆಗೂ ಮೀಸಲಾತಿ ಪ್ರಾತಿನಿಧ್ಯ ಸಿಗದಿರುವುದು ಒಂದು ದುರಂತ ಎನ್ನಬಹುದಾಗಿದೆ.

ಕುಡುಒಕ್ಕಲಿಗ ಸಮುದಾಯದವರು ಕಲ್ಯಾಣ ಕರ್ನಾಟಕ/ಸುವರ್ಣ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿರುವ 15-16 ಜಿಲ್ಲೆಗಳಾದ, (1) ಬೀದರ,(2) ಕಲಬುರಗಿ, (3)ರಾಯಚೂರು(4)ಬಿಜಾಪೂರ (5)ಯಾದಗೀರಿ(6)ಬೆಳಗಾವಿ(7)ದಾರವಾಡ, (8)ಗದಗ(9)ಬಳ್ಳಾರಿ (10) ಬಾಗಲಕೋಟೆ (1) ಕೊಪ್ಪಳ (12) ದಾವಣಗೆರೆ (13) ಚಿತ್ರದುರ್ಗ (14) ವಿಜಯನಗರ (15) ತುಮಕೂರ ಮತ್ತು (16) ಬೆಂಗಳೂರೂರು ಅಂದಾಜು ಜನಸಂಖ್ಯೆ ಒಟ್ಟು 20-21 ಲಕ್ಷ ನಮ್ಮ ಸಮುದಾಯ ಮಕ್ಕಳಿಗೆ ಮತ್ತು ರೈತರಿಗೆ ಯಾವದೇ ತರಹದ ಸೌಲಭ್ಯ ಸಿಗದ ಅತಿ ಹಿಂದುಳಿದಿರುವ “ಕುಡುಒಕ್ಕಲಿಗ” ಸಮುದಾಯವನ್ನು ಆದಷ್ಟು ಬೇಗ ಹಿಂದುಳಿದ ವರ್ಗಗಳ “ಒಕ್ಕಲಿಗ” ಜಾತಿ ಪಟ್ಟಿಯಲ್ಲಿ ಕೈಬಿಟ್ಟ “ಕುಡುಒಕ್ಕಲಿಗರನ್ನು “ಪ್ರವರ್ಗ-3ಎ” ಮೀಸಲಾತಿ ಪಟ್ಟಿಯಲ್ಲಿ ಸೇರಿಸಬೇಕಾಗಿ ಕೋರಿದ್ದಾರೆ.

Read All News