ಉಪ್ಪಾರ ಸಮಾಜಕ್ಕೂ ಮೀಸಲಾತಿ ನೀಡುವಂತೆ ಒತ್ತಾಯ

  • 15 Jan 2024 , 2:29 AM
  • Belagavi
  • 422

ಬೆಳಗಾವಿ: ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ಗುರುವಾರ ಉಪ್ಪಾರ ಸಮಾಜ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಉಪ್ಪಾರ ಸಮಾಜವು ಕರ್ನಾಟಕ ರಾಜ್ಯದಲ್ಲಿ ಸುಮಾರು ೮೦ ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಅತೀ ಹಿಂದುಳಿದ ಜಾತಿಯಾಗಿರುತ್ತದೆ. ಈ ಸಮಾಜವನ್ನು ಸುಮಾರು ದಶಕಗಳಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸಮಾಜದ ಪೂಜ್ಯರು ಹಾಗೂ ಹಿರಿಯರು ಬೃಹತ್ ಸಮಾವೇಶಗಳನ್ನು ಏರ್ಪಡಿಸಿ ಸರ್ಕಾರ ಮಾತ್ರ ಮೀಸಲಾತಿ ‌ನೀಡಿಲ್ಲ‌ ಎಂದು ಮನವಿಯಲ್ಲಿ ‌ದೂರಿದ್ದಾರೆ.

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ಇಲ್ಲಯವರೆಗೂ ಭರವಸೆಯಾಗಿಯೇ ಉಳಿದಿದೆ. ಅದರಂತೆ ಕಳೆದ 2017ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಉರ ಸಮಾವೇಶದಲ್ಲಿ ಉಪ್ಪಾರ ಸಮಾಜವನ್ನು ಅರಿಗಿಷ್ಟ ಜಾತಿ/ಪಂಗಡಕ್ಕೆ ಸೇರಿಸುವ ಆಶ್ವಾಸನೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಈ ಆಶ್ವಾಸನೆ ಈಡೇರಿರುವುದಿಲ್ಲ ಎಂದು ಮನವಿಯಲ್ಲಿ‌ ತಿಳಿಸಿದ್ದಾರೆ.

Read All News