ಬೆಳಗಾವಿ :ಚಳಿಗಾಲದ ಅಧಿವೇಶನವನ್ನು ರೈತ ಅಧಿವೇಶನವನ್ನಾಗಿ ಮಾಡಬೇಕೆಂದು ರಾಷ್ಟ್ರೀಯ ರೈತ ಸಂಘ ಸೋಮವಾರ ಗಾಂಧಿ ನಗರದ ಮೇಲ್ಸೇತುವೆಯ ಬಳಿ ರಂಗೋಲಿ ಹಾಕಿ ಸಚಿವರು ಹಾಗೂ ಶಾಸಕರು ಸಂಚರಿಸುವ ಮಾರ್ಗದಲ್ಲಿ ಸ್ವಾಗತ ಕೋರಿ ಆಗ್ರಹಿಸಿದರು.
ಕಳೆದ ಚಳಿಗಾಲದ ಅಧಿವೇಶನದಿಂದ ಸಚಿವ, ಶಾಸಕರುಗಳಿಗೆ ರೈತರ ಮನೆಯಲ್ಲಿ ವಾಸ್ತವ್ಯ ಮಾಡುವಂತೆ ಮನವಿ ಮಾಡಿಕೊಂಡರೂ ಸರಕಾರ ಮಾತ್ರ ನಮ್ಮ ಬೇಡಿಕೆಗೆ ಸೊಪ್ಪು ಹಾಕುತ್ತಿಲ್ಲ ಆದ್ದರಿಂದ ಸಚಿವರು, ಶಾಸಕರು ಸಂಚರಿಸುವ ಮಾರ್ಗದಲ್ಲಿ ನಿಂತು ಚಳಿಗಾಲದ ಅಧಿವೇಶನವವನ್ನು ರೈತ ಅಧಿವೇಶನವನ್ನಾಗಿ ಮಾರ್ಪಾಡು ಮಾಡಬೇಕೆಂದು ಒತ್ತಾಯಿಸಿದರು.
ರೈತ ಮುಖಂಡರಾದ ಚುನ್ನಪ್ಪ ಪೂಜಾರಿ, ಪ್ರಕಾಶ ನಾಯಕ, ಲಲೀತಾ ಮೊಟ್ಟೆಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.