ವಿವಿಧ ಗಣ್ಯರಿಗೆ ಬೆಳಗಾವಿ ಕೃಷಿ ಉತ್ಸವದ ಆಮಂತ್ರಣ

  • Prasad Kambar
  • 25 Feb 2024 , 7:08 PM
  • Belagavi
  • 340

ಬೆಳಗಾವಿ: ಬೆಳಗಾವಿಯಲ್ಲಿ ಇದೇ ಮಾ.7 ರಿಂದ 11ರ ವರೆಗೆ ಇಲ್ಲಿನ ಸಿಪಿಎಡ್ ಮೈದಾನದಲ್ಲಿ ಆಯೋಜಿಸಿರುವ ಕೃಷಿ ಉತ್ಸವದ ಆಮಂತ್ರಣವನ್ನು ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಸದಸ್ಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ವಿಶ್ವಾಸ ವೈದ್ಯ ಅವರಿಗೆ ಭಾನುವಾರ ಆಮಂತ್ರಣ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿಯಲ್ಲಿ‌ ಇದೇ ಪ್ರಥಮ ಬಾರಿಗೆ ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ರೋಟರಿ ಕ್ಲಬ್ ಆಫ್ ಬೆಳಗಾವಿ ದರ್ಪಣ ಕೃಷಿ ಉತ್ಸವ ಆಯೋಜಿಸಿ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಅಭಿಮಾನದ ಸಂಗತಿ. ರೈತರು ಇದರ ಲಾಭ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಉದ್ದೇಶದಿಂದ ಕೃಷಿ ಉತ್ಸವ ಆಯೋಜನೆ ಮಾಡಿದ್ದು ಸಂತಸ ತಂದಿದೆ. ಖಂಡಿತವಾಗಿ ಈ ಉತ್ಸವದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಕೃಷಿ ಉತ್ಸವ ಇದು. ಹೆಮ್ಮೆಯ ಉತ್ಸವ. ಈ ಉತ್ಸವ ಬೆಳಗಾವಿಯಲ್ಲಿ ನಡೆಯುತ್ತಿರುವುದು ಅಭಿಮಾನದ ಸಂಗತಿ ಎಂದರು.

ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಬೆಳಗಾವಿ ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಸದಾ ಸಮಾಜ ಮುಖಿ ಕೆಲಸ ಮಾಡಿಕೊಂಡು ಬರುತ್ತಿದೆ‌. ರೈತರಿಗೆ ಅನುಕೂಲವಾಗಲು ಕೃಷಿ ಉತ್ಸವ ಆಯೋಜಿಸಿದ್ದು ಇದರ ಲಾಭ ಜಿಲ್ಲೆಯ ರೈತರು ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಅಳವಣಿ, ಅಭಯ ಜೋಶಿ, ಮಾಜಿ ಅಧ್ಯಕ್ಷ ರವಿ ಹತ್ತರಗಿ, ಅಭಿನಂದನ ದರಗಶೆಟ್ಟಿ ಉಪಸ್ಥಿತರಿದ್ದರು.

Read All News