ಬೆಳಗಾವಿ: ಕಳೆದ 2012- 2013 ರಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಬೆಳಗಾವಿ ವಿಭಾಗದ ಪರೀಕ್ಷೆಯಲ್ಲಿ 89ನೇ ರ್ಯಾಂಕ್ ಬಂದರೂ ಇಲ್ಲಿನ ಆಗಿನ ಡಿಡಿಪಿಐ ಹಾಗೂ ಕೆಲ ಅಧಿಕಾರಿಗಳು ನನಗಿಂತ ಕಡಿಮೆ ಅಂಕ ಪಡೆದವನಿಗೆ ಆಯ್ಕೆ ಮಾಡಿದ್ದಾರೆ ಎಂದು ನೋಂದ ಅಭ್ಯರ್ಥಿ ಮಹಾಂತೇಶ ಬೆಣ್ಣಿ ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಭ್ರಷ್ಟಾಚಾರದ ಅಡಿಯಲ್ಲಿ ದೂರು ಸಲ್ಲಿಸಿ ಎಷ್ಟೆ ಪ್ರಭಾವಿಗಳಾಗಿದ್ದರೂ ಅವರನ್ನು ಜೈಲಿಗೆ ಕಳುಹಿಸದೆ ಸುಮ್ಮನೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ ಪಿಎಸ್ಐ ಹಗರಣ ಸದ್ದು ಮಾಡಿದೆ. ನಮ್ಮಂಥ ಸಾಕಷ್ಟು ಅಭ್ಯರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅನ್ಯಾಯವಾಗಿದೆ. ಅವರಿಗೆ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ಎಂಥ ಕಾನೂನು ಹೋರಾಟಕ್ಕೆ ಸಿದ್ಧ ಎಂದರು.