ಮರ್ಚೆಂಟ್ ನೆವಿ ಅಧಿಕಾರಿಯ ಕೈ ಹಿಡಿತಾರಾ ಬೆಳಗಾವಿ ಉತ್ತರದ ಜನತೆ..!

  • Krishna Shinde
  • 15 Jan 2024 , 12:18 AM
  • Belagavi
  • 205

ಬೆಳಗಾವಿ : ಗಾಲಿ ಜನಾರ್ಧನ ರೆಡ್ಡಿ ಕಟ್ಟಿರುವ  ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬೆಳಗಾವಿ ಪೊಲಿಟಿಕ್ಸಗೆ ಎಂಟ್ರಿ ಕೊಟ್ಟಿರುವ ಪ್ರವೀಣ ಹಿರೇಮಠ ತಮ್ಮ ವಾಕ್ಚತುರ್ಯ  ಮತ್ತು ಸರಳ ಜೀವನದ ನಡೆತೆಯಿಂದ ಬೆಳಗಾವಿ ಉತ್ತರದ ಜನ ಮನ ಗೆಲ್ಲಲು ಸಿದ್ದರಾಗಿದ್ದಾರೆ.

ವಿದ್ಯಾಭ್ಯಾಸ ಮುಗಿಸಿ ಮರ್ಚೆಂಟ್ ನೆವಿ ಕೆಲಸಗಿಟ್ಟಿಸಿಕೊಂಡ ಪ್ರವೀಣ 86ದೇಶ ಸುತ್ತಿ ಅಲ್ಲಿನ ಅಭಿವೃದ್ಧಿಗಳನ್ನು ಕಂಡು ಪ್ರೇರಿತರಾಗಿದ್ದಾರೆ,ಅಲ್ಲಿನ ಹೈಟೆಕ್ ಆಸ್ಪತ್ರೆ, ರೋಡ್ ಮತ್ತು ಚರಂಡಿ ವ್ಯವಸ್ಥೆ ಹಾಗು ಸರಕಾರಿ ಶಾಲಾ ಕಾಲೇಜುಗಳ ವ್ಯವಸ್ಥೆ ಕಂಡು ನಮ್ಮ ನಾಡಿನಲ್ಲಿಯೂ ಕೂಡ ಈ ರೀತಿ ಸೌಲಭ್ಯಗಳನ್ನು ಪಡೆಯಬಹುದು ಎಂದು ಮನವರಿಕೆ ಮಾಡಿಕೊಂಡು ರಾಜಕೀಯಕ್ಕೆ ದುಮುಕಿದ್ದಾರೆ ಎಂದು ಹೇಳಿದ್ದಾರೆ.

ಜನ ಸ್ನೇಹಿ ಪ್ರಣಾಳಿಕೆ ಬಿಡುಗಡೆ ಮಾಡಿರುವ ಪ್ರವೀಣ ಅನೇಕ ಹೊಸ ಉಪಾಯ ಹಾಗು ಹೊಸ ತಂತ್ರಜ್ಞಾನದ ಮೂಲಕ ಪರಿಸರ ಸಂರಕ್ಷಣೆ ಮಾಡುವುದಾಗಿ ಹೇಳಿದ್ದಾರೆ ಹಾಗು ಬೆಳಗಾವಿಯಲ್ಲಿ ಐಟಿ,ಬಿಟಿ,ಆಸ್ಪತ್ರೆ ವ್ಯವಸ್ಥೆ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡುವುದಾಗಿ ಅಧಿಕೃತ ಟ್ವಿಟ್ಟರ ಖಾತೆ ಮೂಲಕ ತಿಳಿಸಿದ್ದಾರೆ.

Read All News