ಕನ್ನಡ ವಿದ್ಯಾರ್ಥಿಗಳಗೆ ಥಳಿಸಿದ್ರಾ ಪೊಲೀಸರು…?

  • 15 Jan 2024 , 6:54 AM
  • Bengaluru
  • 339

ಬೆಳಗಾವಿ :ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯಲ್ಲಿ ಟಿಳಕವಾಡಿಯ ಪೊಲೀಸರು ಕನ್ನಡ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಆರೋಪ ಕನ್ನಡ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಗಡಿ ವಿವಾದದ ಕಿಚ್ಚು ಹೊತ್ತಿ ಉರಿಯುತ್ತಿರುವಾಗಲೇ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಕ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಕನ್ನಡದ ಹಾಡಿಗೆ ಕನ್ನಡದ ಧ್ವಜ ಹಿಡಿದು ನೃತ್ಯ ಮಾಡುವ ವೇಳೆ ಮೂವರು ಮರಾಠಿ ಭಾಷಿಕ ವಿದ್ಯಾರ್ಥಿಗಳು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರು ಕನ್ನಡ ವಿದ್ಯಾರ್ಥಿಗಳ ಮೇಲೆ ದರ್ಪ ಮೆರೆದಿದರುವುದು ಎಷ್ಟು ಸರಿ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.

ಕನ್ನಡ ಹೋರಾಟಗಾರ ಸಂಪತಕುಮಾರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಗೆ ಪ್ರಶ್ನೆ ಮಾಡಬೇಕಿದೆ. ಕನ್ನಡಿಗರು ಕನ್ನಡದ ಧ್ವಜವನ್ನು ಹಾರಾಡಿಸಿದರೆ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂಧಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇಲ್ಲಿರುವ ಕೆಲ ಸೋಕಾಲ್ಡ್ ಶಾಸಕರು ಕೇವಲ ಮತ ಬ್ಯಾಂಕ್ ಪಡೆಯಲು ಮಾತ್ರ ಇದ್ದಾರೆ. ಕನ್ನಡಿಗರ ರಕ್ಷಣೆ ಕೊಡುವವರು ಯಾರು ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳುತ್ತೇವೆ. ಪೊಲೀಸರು ಅಮಾಯಕ ಹುಡುಗರನ್ನು ಥಳಿಸಿದ್ದು ಸರಿಯಲ್ಲ ಎಂದರು.

ಪೊಲೀಸ್ ಠಾಣೆಯ ಒಳಗಡೆ ಹೋಗಿ ಹೊರ ಬಂದಾಗ ಕನ್ನಡ ವಿದ್ಯಾರ್ಥಿಗಳಿಗೆ ಪೊಲೀಸರು ಥಳಿಸಿದ್ದಲ್ಲದೆ, ಯಾವುದೇ ರೀತಿ ಹೊರಗಡೆ ಮಾತನಾಡದಂತೆ ತಾಕೀತು ಮಾಡಿ ಕಳುಹಿಸಿದ್ದರು. ಗುರುವಾರ ನಸುಕಿನ ಜಾವ ಪೊಲೀಸರು ಥಳಿಸಿದ ಕನ್ನಡ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಎಂಎಲ್ಸಿ ಮಾಡಿಸಲಾಗಿದೆ. ಕನ್ನಡಿಗರ ಪರವಾಗಿ ಇರಬೇಕಿದ್ದ ಪೊಲೀಸರು ಗಲಾಟೆ ಮಾಡಿದವರನ್ನು ಬಿಟ್ಟು ಕನ್ನಡ ವಿದ್ಯಾರ್ಥಿಗಳಿಗೆ ಥಳಿಸಿದ್ದು ಖಂಡನೀಯ ಎಂದರು.

ಹಲ್ಲೆಗೆ ಒಳಗಾದ ಕನ್ನಡ ವಿದ್ಯಾರ್ಥಿ ಮಾತನಾಡಿ, ನಮಗೆ ನ್ಯಾಯ ಕೊಡಿಸಬೇಕಿದ್ದ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ. ಅಲ್ಲದೆ, ಹಿರಿಯ ಪೊಲೀಸ್ ಅಧಿಕಾರಿಗಳು ಕಚೇರಿಗೆ ಕರೆಸಿಕೊಂಡು ತಂದೆ, ತಾಯಿಯನ್ನು ಹಿಡಿದು ಮನೆಯವರನ್ನು ಎಲ್ಲರನ್ನೂ ನಿಂಧಿಸಿದ್ದಾರೆ. ಅಲ್ಲದೆ, ಹಿರಿಯ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿದ್ದಲ್ಲದೆ, ಬೂಟ್‌ನಿಂದ ಹೊಡೆದಿದ್ದಾರೆ. ಸುದ್ದಿಗಾರರು ಬಂದಾಗ ಅವರ ಜೊತೆಗೆ ಮಾತನಾಡಲು ಬಿಡಲಿಲ್ಲ ಎಂದು ನೇರವಾಗಿ ನಗರ ಪೊಲೀಸರ ಮೇಲೆ ಹಲ್ಲೆಗೆ ಒಳಗಾದ ಕನ್ನಡದ ವಿದ್ಯಾರ್ಥಿ ಗಂಭೀರ ಆರೋಪ ಮಾಡಿದ್ದಾನೆ.

Read All News