ಬೆಳಗಾವಿ : ಅಭಯ ಪಾಟೀಲರು ಶಾಸಕರಾದ ಬಳಿಕ ಬೆಳಗಾವಿ ದಕ್ಷಿಣ ಬೀಹಾರ್ ಆಗಿದ್ದು ಸತ್ಯ ಎಂದು ರಾಜಕುಮಾರ ಟೋಪಣ್ಣವರ ತಿರಗೇಟು ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು ಶಾಸಕ ಅಭಯ ಪಾಟೀಲ ಅವರ ಅಸಲಿ ಮುಖವಾಡ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಜನರಿಗೆ ಮಾತ್ರ ಗೊತ್ತಿದೆ,ಇವರ ಪಿತೂರಿಯಿಂದ ಅದೆಷ್ಟು ಜನ ಜೈಲಿಗೆ ಹೋದ್ರು ಅದೆಷ್ಟು ಜನ ಕಿರುಕಳ ಅನುಭವಿಸಿದರು ಅನ್ನೋದಕ್ಕೆ ಲೆಕ್ಕವೇ ಇಲ್ಲ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಲ್ಡರ್ ಗಳಿಗೆ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಅಭಯ ಪಾಟೀಲರ ಬಗ್ಗೆ ಕೇಳಿದ್ರೆ ಅಭಯ ಪಾಟೀಲರು ಎಷ್ಟು ಸಜ್ಜನರು ಅನ್ನೋದು ಗೊತ್ತಾಗುತ್ತದೆ ಎಂದು ರಾಜಕುಮಾರ ಟೋಪಣ್ಣವರ ಅಭಯ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಿನಿಸು ಕಟ್ಟೆ ಖಾವು ಕಟ್ಟಾ ಬಗ್ಗೆ ತನಿಖೆ ನಡೆದ್ರೆ ಹಿಂದೂ- ಮುಸ್ಲೀಂ ವಿಚಾರವನ್ನು ಪ್ರಸ್ತಾಪ ಮಾಡುವದು, ಬಿಜೆಪಿ ನಗರಸೇವಕ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ರೆ ಅದನ್ನು ಕಾಂಗ್ರೆಸ್ ಬಿಜೆಪಿ ಜಗಳ ಎಂದು ಬಿಂಬಿಸುವದು ಶಾಸಕ ಅಭಯ ಪಾಟೀಲರ ಸದ್ಗುಣ. ಅಭಯ ಪಾಟೀಲ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಅದೆಷ್ಟು ಹಿಂದೂ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪ್ರಾವೇಟ್ ಲೇಔಟ್ ಹಾಕಲು ಅವಕಾಶ ನೀಡಿದ್ದಾರೆ. ಅದನ್ನು ಅವರೇ ಸ್ಪಷ್ಟಪಡಿಸಬೇಕು.ದಕ್ಷಿಣ ಮತಕ್ಷೇತ್ರದಲ್ಲಿ ಅವರ ಸಹೋದರ ಲೇಔಟ್ ಹಾಕಿದ್ದೆಷ್ಟು ? ಉಳಿದ ಹಿಂದೂ ಉದ್ಯಮಿಗಳಿಗೆ ಅಭಯ ಪಾಟೀಲರು ಅಡ್ಡಗಾಲು ಹಾಕಿದ್ದೆಷ್ಟು ? ಅನ್ನೋದನ್ನು ಹಿಂದೂ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ವಿಚಾರಿಸಿದ್ರೆ ಅಭಯ ಪಾಟೀಲರು ಅದೆಷ್ಟು ಹಿಂದೂ ಪ್ರೇಮಿಗಳು ಅನ್ನೋದು ಗೊತ್ತಾಗುತ್ತದೆ ಎಂದು ಟೋಪಣ್ಣವರ ಟೀಕಿಸಿದ್ದಾರೆ.
ಅಭಯ ಪಾಟೀಲ ಅವರ ಅಧಿಕಾರದ ಅವಧಿಯಲ್ಲಿ ಬೆಳಗಾವಿ ದಕ್ಷಿಣ ಅಕ್ಷರಶಃ ಬಿಹಾರ್ ಆಗಿದೆ.ಇದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ಟೋಪಣ್ಣವರ ಹೇಳಿದ್ದಾರೆ.