ಜಗದೀಶ್ ಶೆಟ್ಟರ್ ಬಿಜೆಪಿ ಗರಡಿಯಲ್ಲಿ ಬೆಳೆದವರು: ಕಡಾಡಿ

  • shivaraj bandigi
  • 25 Jan 2024 , 2:27 PM
  • Belagavi
  • 353

ಬೆಳಗಾವಿ :

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಗರಡಿಯಲ್ಲಿ ಬೆಳೆದವರು. ಕಾಂಗ್ರೆಸ್ ಸಂಸ್ಕೃತಿ ಒಪ್ಪಲ್ಲಿಲ್ಲ ಆದ್ದರಿಂದ ‌ಮರಳಿ ಪಕ್ಷಕ್ಕೆ ಬಂದಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಯ ಗಡರಿಯಲ್ಲಿ ಬೆಳೆದವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅವರ ಮನಸ್ಸಿಗೆ ನೋವು ಮಾಡಿಕೊಂಡು ಹೋರಗೆ ಹೋದವರು. ಈಗ ಮರಳಿ ಮನೆಗೆ ಬಂದಿದ್ದಾರೆ.

ಅವರಿಗೆ ಕಾಂಗ್ರೆಸ್ ಸಂಸ್ಕೃತಿ, ಸಿದ್ಧಾಂತ ಒಪ್ಪುವುದಿಲ್ಲ. ಅವರ ತಂದೆ ಜನಸಂಗದ ಮೂಲಕ ಬೆಳಕಿಗೆ ಬಂದವರು. ಅವರು ಬಿಜೆಪಿಯಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಇದ್ದರು. ಅವರಿಗೆ ಕಾಂಗ್ರೆಸ್ ನಲ್ಲಿ ಅಷ್ಟೊಂದು ಸಂಘಟನೆ ಮಾಡಿಲ್ಲ. ಅವರು ಸಕ್ರಿಯವಾಗಿ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿರಲಿಲ್ಲ. ಈಗ ಬಿಜೆಪಿಗೆ ಬಂದಿರುವುದು ಶಕ್ತಿ ಬಂದಿದೆ ಎಂದರು.

ಬಿಜೆಪಿಯಲ್ಲಿ ಯಾರಿಗೂ ಆಮಿಷ್ ಹಾಕಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಪಕ್ಷಕ್ಕೆ ಸಾಕಷ್ಟು ಕೊಡುಗೆ ಶೆಟ್ಟರ್ ಅವರದ್ದು ಇದೆ. ಅವರಿಗೆ ಸ್ಥಾನ ಮಾನಕ್ಕೆ ತಕ್ಕಂತೆ ಗೌರವ ಹುದ್ದೆ ನೀಡುವ ಚಿಂತನೆ ಬಿಜೆಪಿಯಲ್ಲಿದೆ ಎಂದರು.

Read All News