ಎಲ್ಲಮ್ಮನ ಭಕ್ತರಿಗೆ ಜಲ ಕಂಟಕ ; ಸವದಿ ಕ್ಷೆತ್ರದಲ್ಲಿ ಅವ್ಯವಸ್ಥೆ

  • shivaraj B
  • 25 Aug 2024 , 2:39 PM
  • Athani
  • 514

ಅಥಣಿ : ಅಥಣಿ ತಾಲೂಕಿನ ಕೊಕಟನೂರ್ ಎಲ್ಲಮ್ಮವಾಡಿ ಗ್ರಾಮದಲ್ಲಿ ಕಂಡು ಬಂದ ದೃಶ್ಯವಿದು.ಅಥಣಿ-ಸಾವಳಗಿ ಹೆದ್ದಾರಿಯ ದುಸ್ತೀತಿ ಕಂಡು ರಸ್ತೆ ಸಂಚಾರಕರು ಕ್ಷೇತ್ರ ಶಾಸಕ ಹಾಗೂ ಸ್ಥಳೀಯ ಪಿ ಡಬ್ಲ್ಯೂ ಡಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಸುಕ್ಷೇತ್ರ ಎಲ್ಲಮ್ಮವಾಡಿಯ ಶ್ರೀ ರೇಣುಕಾ ದೇವಸ್ಥಾನ ಪಕ್ಕದ ಸೇತುವೆ ಮೇಲೆ ಮಳೆ ನೀರು ನಿಂತು ರಸ್ತೆ ಸಂಚಾರಕರು ಜೀವ ಭಯದಲ್ಲೇ ಸಾಗುವಂತಾಗಿದೆ.


ರಸ್ತೆಯುದ್ಧಕ್ಕೂ ಬಿದ್ದ ಗುಂಡಿಗಳಿಂದ ಹೈರಾನಾದ ಜನರು ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಸ್ಥಳೀಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನೀರಲ್ಲೇ ನಿಂತು ಆಕ್ರೋಶ ಹೊರಹಾಕಿದ್ದಾರೆ.

ವರದಿ : ರಾಹುಲ್  ಮಾದರ 

Read All News