ಗಂಗಾವತಿ:ನೀಲಕಂಠೇಶ್ವರ ವೃತ್ತದಲ್ಲಿರುವ ಸರಕಾರಿ ಬಾಲಕಿಯರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಉಚಿತ ಪಠ್ಯ ಪುಸ್ತಕ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಗಂಗಾವತಿ ಶಾಸಕರಾದ ಗಾಲಿ ಜನಾರ್ಧನ ರೆಡ್ಡಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಬೆರೆತಿದ್ದಾರೆ.
ಮಕ್ಕಳಿಗೆ ಪಠ್ಯಪುಸ್ತಕ ಸಮವಸ್ತ್ರ ವಿತರಿಸಿ, ಶಾಲೆಯ ಕರಪತ್ರ ಬಿಡುಗಡೆ ಮಾಡಿದ ರೆಡ್ಡಿ ಮಕ್ಕಳಿಗೆ ಕಿರು ಕಾಣಿಕೆಯಾಗಿ ಜಾಮೇಟ್ರಿ ಬಾಕ್ಸ್ ವಿತರಿಸಿದ್ದಾರೆ ನಂತರ ಮಕ್ಕಳೊಂದಿಗೆ ಮಾತನಾಡಿದ ಜನಾರ್ಧನ ರೆಡ್ಡಿ ಶಾಲೆ ಒಂದು ಭವ್ಯ ಮಂದಿರ ಚೆನ್ನಾಗಿ ಕಲಿತು ತಾಲೂಕಿಗೆ ಉತ್ತಮ ಹೆಸರು ತರಬೇಕೆಂದು ಶುಭ ಹಾರೈಸಿದ್ದಾರೆ.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಗೌಡ, ನಗರಸಭೆ ಆಯುಕ್ತ ವಿರೂಪಾಕ್ಷ ಮೂರ್ತಿ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.