ಅಥಣಿ : ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಆ ಪ್ರಕರಣ ಸ್ವಚ್ಛವಾಗುತ್ತದೆ ಯಾವುದೇ ಗೊಂದಲ ಉಂಟಾಗಲ್ಲ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಪ್ರತಿಕ್ರಿಯಿಸಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಿಸಿದ ವಿಚಾರವಾಗಿ ಅವರು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮಾತನಾಡುತ್ತಾ ರಮೇಶ್ ಜಾರಕಿಹೊಳಿ ಅವರು ಹೇಳಿದ ರೀತಿಯಲ್ಲಿ ಸಿಡಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಈ ಪ್ರಕರಣ ಸ್ವಚ್ಚವಾಗುತ್ತದೆ ಮತ್ತು ಈ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಷಡ್ಯಂತ್ರ ಮಾಡಿಸಲಾಗಿದೆ.
ನಾನು ಮೊದಲಿಂದಲೂ ಇದನ್ನೇ ಹೇಳಿಕೊಂಡು ಬಂದಿದ್ದೇನೆ. ಮೊದಲು ರಾಜ್ಯರ ಕಾಲದಲ್ಲೂ ವಿಷಕನ್ಯೆ ಇದ್ದರು. ಅದೆ ರೀತಿಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಪ್ರಕರಣದಲ್ಲಿ ಸಿಗಸಲಾಗಾದೆ ಎಂದು ಬೆಸರ ವ್ಯಕ್ತಪಡಿಸಿದರು.
ಅಮಿತ್ ಶಾ ಬೆಳಗಾವಿ ನಾಯಕರ ಜೊತೆ ಸಭೆ ವಿಚಾರ:
ಕೇಂದ್ರ ಸಚಿವ ಅಮಿತ್ ಷಾ ಅವರು ಮೊನ್ನೆ ಬೆಳಗಾವಿ ನಗರದಲ್ಲಿ ಬೆಳಗಾವಿ ನಾಯಕರು ಜೊತೆ ಸರಿ ಸುಮಾರು ಮೂರು ಗಂಟೆಗಳ ಕಾಲ ಬೆಳಗಾವಿ ಖಾಸಗಿ ಹೊಟೇಲಿನಲ್ಲಿ ಎಲ್ಲಾ ಶಾಸಕರು ಮುಖಂಡರು ಎಲ್ಲರನ್ನೂ ಕೂಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಂಡು, ಒಂದು ಬಹಳ ಸ್ಪಷ್ಟವಾದ ವಿಚಾರವನ್ನು ವ್ಯಕ್ತಪಡಿಸಿದ್ದಾರೆ. 2023ಕ್ಕೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರೂದಕ್ಕೆ ಎಲ್ಲ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡ್ತಿರಿಲ್ಲೋ ಎಂದು ಕೇಳಿದಾಗ ನಾವೂ ಎಲ್ಲರೂ ಎದ್ದು ನೀತು ಕೆಲಸ ಮಾಡಲಾಗುವುದು ಎಂದು ಹೇಳಿದ್ದೇವೆ.
ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಆಂತರಿಕ ವಿಚಾರಗಳು ಪಕ್ಕಕ್ಕೆ ಇಟ್ಟು ಪಕ್ಷ ಬಂತು ಎಂದರೆ ಎಲ್ಲವನ್ನೂ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಮತ್ತೆ 2023 ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಮಾತು ನೀಡಿದ್ದೇವೆ. ಅಮಿತ ಶಾ ಅವರು ಕರ್ನಾಟದಲ್ಲಿ ಮತ್ತೆ ಭಾಜಪಾ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಹಾಗೂ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.